ಮಂಗಳವಾರ, ಸೆಪ್ಟೆಂಬರ್ 28, 2021
20 °C

ಬಿಬಿಎಂಪಿ ಜಾಹೀರಾತು ನಿಯಮ ಸಮಂಜಸ: ಹೊರಾಂಗಣ ಜಾಹೀರಾತು ಸಂಘ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿ ಜಾಹೀರಾತು ನಿಯಮಗಳು–2019’ ಸೈನೇಜ್ ಬೈಲಾದಡಿ ಬರುವುದಿಲ್ಲ. ಈ ನಿಯಮದಡಿ ನೀಡುವ ಜಾಹೀರಾತುಗಳಿಂದ ಸರ್ಕಾರಕ್ಕೂ ಆದಾಯ ಬರಲಿದ್ದು, ಈ ನಿಯಮಗಳು ಸಮಂಜಸವಾಗಿವೆ’ ಎಂದು ಬೆಂಗಳೂರು ಹೊರಾಂಗಣ ಜಾಹೀರಾತು ಸಂಘ ತಿಳಿಸಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್‌.ಎಂ.ಜವಾದ್, ‘ಹೊರಾಂಗಣ ಜಾಹೀರಾತು ಸಂಸ್ಥೆಗಳು ಕಾನೂನು ಬದ್ಧ ಜಾಹೀರಾತುಗಳನ್ನು ಮಾತ್ರ ಪ್ರದರ್ಶಿಸುತ್ತದೆ. ಈ ನಿಯಮಗಳಿಂದ ನಗರದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವುದು ತಪ್ಪು ಕಲ್ಪನೆ. ಇವು, ಆರ್ಥಿಕ ಸಂಕಷ್ಟದ ಸಮಯದಲ್ಲಿ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ದೂರದೃಷ್ಟಿಯ ನಿಯಮಗಳು’ ಎಂದರು.

‘ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶನದ ಮೇಲೂ ಈ ನಿಯಮಗಳು ಸಮಗ್ರ ನಿಯಂತ್ರಣ ಹೊಂದಿವೆ. ಜಾಹೀರಾತು ಪ್ರದರ್ಶನಕ್ಕೆ ಪರವಾನಗಿ, ಶುಲ್ಕ ಸಂಗ್ರಹ ಹಾಗೂ ನವೀಕರಣ ಪ್ರಕ್ರಿಯೆಗಳು ಆನ್‌ಲೈನ್‌ ಮೂಲಕ ನಡೆಯುವುದರಿಂದ ಪಾರದರ್ಶಕವಾಗಿರಲಿದೆ ಹಾಗೂ ಅಕ್ರಮ ಜಾಹೀರಾತುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ’ ಎಂದು ವಿವರಿಸಿದರು.

ಸಂಘದ ಗೌರವ ಕಾರ್ಯದರ್ಶಿ ಮನಮೋಹನ್ ಸಿಂಗ್ ಮಾನ್, ‘ಲೆಗಸಿ ಬಿಲ್‌ಬೋರ್ಡ್‌ಗಳಿಂದ ನಾಗರಿಕ ಮೂಲ ಸೌಕರ್ಯಕ್ಕೆ ಹೊರೆಯಾಗುವುದಿಲ್ಲ. ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂಬ ತಪ್ಪು ಮಾಹಿತಿ ಎಲ್ಲೆಡೆ ವ್ಯಾಪಿಸಿದೆ. ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್‌ನಂತಹ ಜಾಹೀರಾತುಗಳಿಗೆ ಮಾತ್ರ ನಿಷೇಧ ಹೇರಲಾಗಿದ್ದು, ಹೊರಾಂಗಣ ಜಾಹೀರಾತನ್ನು ನಿರ್ಬಂಧಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು