ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: 75 ಉಪ ವಿಭಾಗ ರಚನೆ

Published 29 ಡಿಸೆಂಬರ್ 2023, 19:41 IST
Last Updated 29 ಡಿಸೆಂಬರ್ 2023, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 225 ವಾರ್ಡ್‌ಗಳನ್ನು 75 ಕಂದಾಯ, ಆರೋಗ್ಯ, ಕಾಮಗಾರಿ ಉಪ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

225 ವಾರ್ಡ್‌ಗಳನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪಾಲಿಕೆಯಲ್ಲಿ ಯಥಾವತ್ತಾಗಿ ಅಳವಡಿಸಿಕೊಳ್ಳಲು ಆಡಳಿತಾತ್ಮಕ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ಉಪ ವಿಭಾಗಗಳನ್ನೂ ಪುನರ್ ವಿಂಗಡಿಸಲಾಗಿದೆ.

ಪ್ರತಿ ಉಪ ವಿಭಾಗದಲ್ಲಿ ಎರಡರಿಂದ ನಾಲ್ಕು ವಾರ್ಡ್‌ಗಳಿರುವಂತೆ ವಿಂಗಡಿಸಲಾಗಿದೆ. ಎಂಟು ವಲಯಗಳಲ್ಲಿ 30 ವಿಭಾಗಗಳನ್ನು ರಚಿಸಿ ಅದರಡಿ 75 ಉಪ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವಂತೆ ಮುಖ್ಯ ಆಯುಕ್ತರು ಡಿ.29ರಂದು ಆದೇಶ ಹೊರಡಿಸಿದ್ದಾರೆ.

ವಿಭಾಗ, ಉಪ ವಿಭಾಗಗಳ ವಿವರ

ವಲಯ;ವಿಭಾಗ;ಉಪ ವಿಭಾಗ

‌ಬೊಮ್ಮನಹಳ್ಳಿ;3;9

ದಾಸರಹಳ್ಳಿ;2;4

ಪೂರ್ವ;6;13

ಮಹದೇವಪುರ;2;9

ರಾಜರಾಜೇಶ್ವರಿ ನಗರ;3;7

ದಕ್ಷಿಣ;6;14

ಯಲಹಂಕ;2;6

ಪಶ್ಚಿಮ;6;13

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT