ಬೆಂಗಳೂರು: ಬಿಬಿಎಂಪಿಗೆ 225 ವಾರ್ಡ್‌ಗಳನ್ನು ರಚಿಸಲಾಗಿದ್ದು, ಕರಡು ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.
ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದ ಆಯೋಗವನ್ನು ಜೂನ್ 23ರಂದು ಸರ್ಕಾರ ಪುನರ್ ರಚಿಸಿತ್ತು. ಹೈಕೋರ್ಟ್ ಆದೇಶದಂತೆ 12 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ವಾರ್ಡ್‌ಗಳ ಸಂಖ್ಯೆಯನ್ನು 243ರಿಂದ 225ಕ್ಕೆ ಇಳಿಸಿ ಸರ್ಕಾರ ಆ.4ರಂದು ಅಧಿಸೂಚನೆ ಹೊರಡಿಸಿತ್ತು. ಇದಾದ ಮೇಲೆ ಆಯೋಗ ವಾರ್ಡ್‌ಗಳ ಪುನರ್ ರಚಿಸಿ, ಗಡಿ ಗುರುತಿಸಿ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿತ್ತು.
ವಾರ್ಡ್ ವಿಂಗಡಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಆಕ್ಷೇಪಣೆಗಳಿದ್ದರೆ 15 ದಿನದೊಳಗೆ ಲಿಖಿತ ರೂಪದಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸಬಹುದು.
18 ವಾರ್ಡ್ ಕಡಿತ: 243 ವಾರ್ಡ್‌ಗಳಿಂದ 225 ವಾರ್ಡ್‌ಗಳಿಗೆ ವ್ಯಾಪ್ತಿ ಕಡಿತಗೊಳಿಸಿದ್ದು, ವಿಧಾನಸಭೆ ಕ್ಷೇತ್ರ ಲೆಕ್ಕಾಚಾರದಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲಿ ವಾರ್ಡ್‌ಗಳ ಕಡಿಮೆಯಾಗಿವೆ. ದಾಸರಹಳ್ಳಿ, ಯಲಹಂಕ, ಜಯನಗರ ವಿಧಾನಸಭೆ ಕ್ಷೇತ್ರ ಹೊರತುಪಡಿಸಿದರೆ ಬಿಜೆಪಿ ಶಾಸಕರಿರುವ 13 ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿತಗೊಳಿಸಲಾಗಿದೆ.
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದಲ್ಲಿ 14 ವಾರ್ಡ್‌ಗಳನ್ನು ರಚಿಸಲಾಗಿತ್ತು, ಅದನ್ನು 12ಕ್ಕೆ ಇಳಿಸಲಾಗಿದೆ. ಮಹದೇವಪುರ, ಪದ್ಮನಾಭನಗರ, ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರಗಳಲ್ಲೂ ಎರಡು ವಾರ್ಡ್ ಕಡಿಮೆಯಾಗಿವೆ. ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಸಿ.ವಿ. ರಾಮನ್ ನಗರ, ರಾಜಾಜಿನಗರ, ಚಿಕ್ಕಪೇಟೆ, ಬಸವನಗುಡಿ, ಕೆ.ಆರ್. ಪುರ, ಯಶವಂತಪುರ, ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ ಒಂದೊಂದು ವಾರ್ಡ್ ಕಡಿಮೆಯಾಗಿವೆ.
ವಾರ್ಡ್ ಹೆಸರೂ ಬದಲು: ಬಿಜೆಪಿ ಸರ್ಕಾರ 243 ವಾರ್ಡ್‌ಗಳನ್ನು ರಚಿಸಿದ್ದಾಗ ನೀಡಲಾಗಿದ್ದ ಹಲವು ವಾರ್ಡ್‌ಗಳ ಹೆಸರೂ ಬದಲಾವಣೆಯಾಗಿವೆ. ಕರಡು ಪಟ್ಟಿಯಲ್ಲಿ 225 ವಾರ್ಡ್‌ಗಳಲ್ಲಿ ಹಳೆಯ ಹೆಸರನ್ನೇ ಬಹುತೇಕ ಉಳಿಸಿಕೊಳ್ಳಲಾಗಿದ್ದರೂ, ಬಿಜೆಪಿ ಬಣ್ಣದ ಹೆಸರನ್ನು ಕೈಬಿಡಲಾಗಿದೆ ಎನ್ನಲಾಗಿದೆ.
243 ವಾರ್ಡ್‌ಗಳಿದ್ದಾಗ ಜನಸಂಖ್ಯೆ ಆಧಾರದಲ್ಲಿ ಹಲವು ವಾರ್ಡ್‌ಗಳಲ್ಲಿ ಸಂಖ್ಯೆ ಕಡಿಮೆ ಇತ್ತು. 20 ಸಾವಿರ ಜನಸಂಖ್ಯೆಗೂ ವಾರ್ಡ್ ರಚಿಸಲಾಗಿತ್ತು. ಆದರೆ, ಇದೀಗ 2011ರ ಜನಗಣತಿಗೆ ಅನುಗುಣವಾಗಿ ಸರಾಸರಿ 37,527 ಜನಸಂಖ್ಯೆಗೆ ಒಂದು ವಾರ್ಡ್ ರಚಿಸಲಾಗಿದೆ.
225 ವಾರ್ಡ್‌ಗಳು ಒಳಗೊಳ್ಳುವ ಪ್ರದೇಶ, ಗಡಿ ಹಾಗೂ ಇತರೆ ವಿವರಗಳಿಗೆ erajyapatra.karnataka.gov.in
ಡಿಸೆಂಬರ್‌ನಲ್ಲಿ ಚುನಾವಣೆ: ಸಚಿವ ರಾಮಲಿಂಗಾರೆಡ್ಡಿ
ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಹೈಕೋರ್ಟ್ ಆದೇಶವೂ ಇದೆ. ವಿಳಂಬ ಮಾಡಲಾಗುವುದಿಲ್ಲ. ವಾರ್ಡ್ ಮರುವಿಂಗಡಣೆ ಕಾರ್ಯ ಮುಗಿದಿದೆ. ಅದನ್ನು ಶೀಘ್ರ ಅಂತಿಮಗೊಳಿಸಲಾಗುವುದು. ಮೀಸಲಾತಿಯನ್ನೂ ನಿಗದಿಮಾಡಿ ಅಧಿಸೂಚಿಸಲಾಗುವುದು. ಇನ್ನೆರಡು ತಿಂಗಳಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ನವೆಂಬರ್–ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಗಡಿ ರಚನೆ ಅವೈಜ್ಞಾನಿಕ: ರಮೇಶ್
‘ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳ ವಾರ್ಡ್‌ಗಳಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತಗಳು ನಾಲ್ಕಾರು ಸಾವಿರ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಂಡಿದೆ. ಹೆಚ್ಚು ವಾರ್ಡ್ ಗೆಲ್ಲಬೇಕೆಂಬ ರಾಜಕೀಯ ಉದ್ದೇಶದಿಂದ ವಾರ್ಡ್ ಗಡಿ ಸಾಕಷ್ಟು ಬದಲಾಗಿದ್ದು, ವಕ್ರಾಕಾರ, ಲಂಬಾಕಾರದಲ್ಲಿದೆ. ಇದು ಅವೈಜ್ಞಾನಿಕವಾಗಿದ್ದು, 198 ವಾರ್ಡ್‌ಗಳಲ್ಲೂ ಹೋರಾಟ ಮಾಡಲಾಗುತ್ತದೆ’ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಆರೋಪಿಸಿದರು.
ವಾರ್ಡ್‌ಗಳು
1. ಕೆಂಪೇಗೌಡ ವಾರ್ಡ್
2. ಚೌಡೇಶ್ವರ ವಾರ್ಡ್
3. ಅಟ್ಟೂರು
4. ಯಲಹಂಕ ಸ್ಯಾಟಲೈಟ್ ಟೌನ್
5. ಕೋಗಿಲು
6. ಜಕ್ಕೂರು
7. ಥಣಿಸಂದ್ರ
8. ಅಮೃತಹಳ್ಳಿ
9. ಹೆಬ್ಬಾಳ ಕೆಂಪಾಪುರ
10. ಬ್ಯಾಟರಾಯನಪುರ
11. ಕೊಡಿಗೇಹಳ್ಳಿ
12. ದೊಡ್ಡ ಬೊಮ್ಮಸಂದ್ರ
13. ವಿದ್ಯಾರಣ್ಯಪುರ
14. ಕುವೆಂಪುನಗರ
15. ಕಮ್ಮಗೊಂಡನಹಳ್ಳಿ
16. ಮಲ್ಲಸಂದ್ರ
17. ಚಿಕ್ಕಸಂದ್ರ
18. ಬಾಗಲಕುಂಟೆ
19. ಟಿ. ದಾಸರಹಳ್ಳಿ
20. ನೆಲಗೆದರನಹಳ್ಳಿ
21. ಚೊಕ್ಕಸಂದ್ರ
22. ಪೀಣ್ಯ ಕೈಗಾರಿಕೆ ಪ್ರದೇಶ
23. ರಾಜಗೋಪಾಲ್ ನಗರ
24. ಹೆಗ್ಗನಹಳ್ಳಿ
25. ಸುಂಕದಕಟ್ಟೆ
26. ದೊಡ್ಡಬಿದರಕಲ್ಲು
27. ಬ್ಯಾಡರಹಳ್ಳಿ
28. ಹೇರೋಹಳ್ಳಿ
29. ಉಲ್ಲಾಳು
30. ನಾಗದೇವನಹಳ್ಳಿ
31. ಬಂಡೆ ಮಠ
32. ಕೆಂಗೇರಿ
33. ಹೆಮ್ಮಿಗೆಪುರ
34. ಜೆ.ಪಿ. ಪಾರ್ಕ್
35. ಯಶವಂತಪುರ
36. ಜಾಲಹಳ್ಳಿ
37. ಪೀಣ್ಯ
38. ಲಕ್ಷ್ಮೀದೇವಿ ನಗರ
39. ಲಗ್ಗೆರೆ
40. ಚೌಡೇಶ್ವರಿನಗರ
41. ಕೊಟ್ಟಿಗೆಪಾಳ್ಯ
42. ಶ್ರೀಗಂಧದ ಕಾವಲ್
43. ಮಲ್ಲತಹಳ್ಳಿ
44. ಜ್ಞಾನಭಾರತಿ
45. ರಾಜರಾಜೇಶ್ವರಿನಗರ
46. ಮಾರಪ್ಪನಪಾಳ್ಯ
47. ನಂದಿನಿ ಲೇಔಟ್
48. ಮಹಾಲಕ್ಷ್ಮೀಪುರಂ
49. ನಾಗಾಪುರ
50. ಡಾ.ಪುನೀತ್ ರಾಜ್ ಕುಮಾರ್
51. ಶಂಕರಮಠ
52. ಶಕ್ತಿ ಗಣಪತಿ ನಗರ
53. ವೃಷಭಾವತಿ ನಗರ
54. ಮತ್ತಿಕೆರೆ
55. ಮಲ್ಲೇಶ್ವರ
56. ಅರಮನೆ ನಗರ
57. ರಾಜಮಹಲ್ ಗುಟ್ಟಹಳ್ಳಿ
58. ಕಾಡು ಮಲ್ಲೇಶ್ವರ
59. ಸುಬ್ರಹ್ಮಣ್ಯ ನಗರ
60. ಗಾಯಿತ್ರಿ ನಗರ
61. ರಾಧಾಕೃಷ್ಣ ದೇವಸ್ಥಾನ
62. ಸಂಜಯನಗರ
63. ಹೆಬ್ಬಾಳ
64. ವಿಶ್ವನಾಥ ನಾಗೇನಹಳ್ಳಿ
65. ಮನೋರಾಯನಪಾಳ್ಯ
66. ಚಾಮುಂಡಿ ನಗರ
67. ಗಂಗಾನಗರ
68. ಜಯಚಾಮರಾಜೇಂದ್ರ ನಗರ
69. ಕಾವಲ್ ಬೈರಸಂದ್ರ
70. ಕುಶಾಲ್ ನಗರ
71. ಮುನೇಶ್ವರ ನಗರ
72. ದೇವರ ಜೀವನಹಳ್ಳಿ
73. ಎಸ್.ಕೆ. ಗಾರ್ಡನ್
74. ಸಗಾಯರಪುರಂ
75. ಪುಲಕೇಶಿನಗರ
76. ಹೆಣ್ಣೂರು
77. ನಾಗವಾರ
78. ಎಚ್‌ಬಿಆರ್ ಲೇಔಟ್
79. ಕಾಡುಗೊಂಡನಹಳ್ಳಿ
80. ಕಾಚರಕನಹಳ್ಳಿ
81. ಕಮ್ಮನಹಳ್ಳಿ
82. ಬಾಣಸವಾಡಿ
83. ಕೆಎಸ್‌ಎಫ್‌ಸಿ ಲೇಔಟ್
84. ಲಿಂಗರಾಜಪುರ
85. ಮಾರುತಿ ಸೇವಾನಗರ
86. ಚಳ್ಳಕೆರೆ
87. ಹೊರಮಾವು
88. ಕಲ್ಕೆರೆ
89. ವಿಜಿನಾಪುರ
90. ರಾಮಮೂರ್ತಿ ನಗರ
91. ಕೆ.ಆರ್. ಪುರ
92. ಬಸವನಪುರ
93. ದೇವಸಂದ್ರ
94. ಎ. ನಾರಾಯಣಪುರ
95. ವಿಜ್ಞಾನನಗರ
96. ಎಚ್‌ಎಎಲ್ ವಿಮಾನ ನಿಲ್ದಾಣ
97. ಕಾಡುಗೋಡಿ
98. ಬೆಳತ್ತೂರು
99. ಹೂಡಿ
100. ಗರುಡಾಚಾರ್ ಪಾಳ್ಯ
101. ದೊಡ್ಡನೆಕ್ಕುಂದಿ
102. ಎಇಸಿಎಸ್ ಲೇಔಟ್
103. ವೈಟ್‌ಫೀಲ್ಡ್
104. ವರ್ತೂರು
105. ಮುನ್ನೆಕೊಳಲು
106. ಮಾರತ್ತಹಳ್ಳಿ
107. ಬೆಳ್ಳಂದೂರು
108. ಕಾಕ್ಸ್ ಟೌನ್
109. ಬೆನ್ನಿಗಾನಹಳ್ಳಿ
110. ಸಿ.ವಿ. ರಾಮನ್ ನಗರ
111. ಕಗ್ಗದಾಸಪುರ
112. ಹೊಸ ತಿಪ್ಪಸಂದ್ರ
113. ಹೊಯ್ಸಳ ನಗರ
114. ಜೀವನಬಿಮಾನಗರ
115. ಕೋನೇನ ಅಗ್ರಹಾರ
116. ರಾಮಸ್ವಾಮಿ ಪಾಳ್ಯ
117. ವಸಂತನಗರ
118. ಎಸ್.ಆರ್. ನಗರ
119. ಶಿವಾಜಿನಗರ
120. ಭಾರತಿನಗರ
121. ಹಲಸೂರು
122. ದತ್ತಾತ್ರೇಯ ದೇವಸ್ಥಾನ
123. ಗಾಂಧಿನಗರ
124. ಸುಭಾಷ್ ನಗರ
125. ಓಕಳಿಪುರ
126. ಬಿನ್ನಿಪೇಟೆ
127. ಕಾಟನ್‌ಪೇಟೆ
128. ಚಿಕ್ಕಪೇಟೆ
129. ದಯಾನಂದ ನಗರ
130. ಪ್ರಕಾಶ್ ನಗರ
131. ಶ್ರೀರಾಮಮಂದಿರ
132. ಶಿವನಗರ
133. ಬಸವೇಶ್ವರನಗರ
134. ಕಾಮಾಕ್ಷಿಪಾಳ್ಯ
135. ಡಾ. ರಾಜ್‌ಕುಮಾರ್ ಅಗ್ರಹಾರ ದಾಸರಹಳ್ಳಿ
136. ಗೋವಿಂದರಾಜನಗರ
137. ಮಾರೇನಹಳ್ಳಿ
138. ಕಾವೇರಿಪುರ
139. ಮೂಡಲಪಾಳ್ಯ
140. ಮಾರುತಿ ಮಂದಿರ
141. ನಾಗರಭಾವಿ
142. ಚಂದ್ರಾ ಲೇಔಟ್
143. ನಾಯಂಡಹಳ್ಳಿ
144. ಕೆಂಪಾಪುರ ಅಗ್ರಹಾರ
145. ವಿಜಯನಗರ
146. ಹೊಸಹಳ್ಳಿ
147. ಹಂಪಿನಗರ
148. ಹೊಸ ಗುಡ್ಡದಹಳ್ಳಿ
149. ಗಾಳಿ ಆಂಜನೇಯ ದೇವಸ್ಥಾನ
150. ಅತ್ತಿಗುಪ್ಪೆ
151. ದೀಪಾಂಜಲಿನಗರ
152. ಆವಲಹಳ್ಳಿ
153. ಪಾದರಾಯನಪುರ
154. ರಾಯಪುರಂ
155. ದೇವರಾಜ ಅರಸ್ ನಗರ
156. ಚಲವಾದಿಪಾಳ್ಯ
157. ಕೆ.ಆರ್. ಮಾರುಕಟ್ಟೆ
158. ಚಾಮರಾಜಪೇಟೆ
159. ಆಜಾದ್ ನಗರ
160. ಧರ್ಮರಾಯಸ್ವಾಮಿ ದೇವಸ್ಥಾನ
161. ಸಿಲ್ವರ್ ಜೂಬ್ಲಿ ಪಾರ್ಕ್
162. ಸುಂಕೇನಹಳ್ಳಿ
163. ವಿಶ್ವೇಶ್ವರಪುರ
164. ಹೊಂಬೇಗೌಡ ನಗರ
165. ಸೋಮೇಶ್ವರ ನಗರ
166. ಶಾಂತಿನಗರ
167. ಶಾಂತಲಾ ನಗರ
168. ನೀಲಸಂದ್ರ
169. ವನ್ನಾರ್ ಪೇಟೆ
170. ಜೋಗುಪಾಳ್ಯ
171. ದೊಮ್ಮಲೂರು
172. ಅಗರಂ
173. ಈಜಿಪುರ
174. ಕೋರಮಂಗಲ
175. ಜಕ್ಕಸಂದ್ರ
176. ಆಡುಗೋಡಿ
177. ಲಕ್ಕಸಂದ್ರ
178. ಸುದ್ದಗುಂಟೆ ಪಾಳ್ಯ
179. ಮಡಿವಾಳ
180. ಸೋಮೇಶ್ವರ ದೇವಸ್ಥಾನ
181. ಬಿಟಿಎಂ ಲೇಔಟ್
182. ಬೈರಸಂದ್ರ
183. ಗುರಪ್ಪನಪಾಳ್ಯ
184. ಜಯನಗರ ಪೂರ್ವ
185. ಜೆ.ಪಿ. ನಗರ
186. ಶಾಕಾಂಬರಿ ನಗರ
187. ಸಾರಕ್ಕಿ
188. ಯಡಿಯೂರು
189. ಗಣೇಶ ಮಂದಿರ
190. ದೇವಗಿರಿ ದೇವಸ್ಥಾನ
191. ಬನಶಂಕರಿ ದೇವಸ್ಥಾನ
192. ಕುಮಾರಸ್ವಾಮಿ ಲೇಔಟ್
193. ಪದ್ಮನಾಭನಗರ
194. ಚಿಕ್ಕಲಸಂದ್ರ
195. ಹೊಸಕೆರೆಹಳ್ಳಿ
196. ಹನುಮಂತನಗರ
197. ಶ್ರೀನಗರ
198. ಬಸವನಗುಡಿ
199. ವಿದ್ಯಾಪೀಠ
200. ಗಿರಿನಗರ
201. ಕತ್ರಿಗುಪ್ಪೆ
202. ಉತ್ತರಹಳ್ಳಿ
203. ಸುಬ್ರಹ್ಮಣ್ಯಪುರ
204. ವಸಂತಪುರ
205. ಯಲಚೇನಹಳ್ಳಿ
206. ಕೋಣನಕುಂಟೆ
207. ಆರ್‌ಬಿಐ ಲೇಔಟ್
208. ಅಂಜನಾಪುರ
209. ಗೊಟ್ಟಿಗೆರೆ
210. ಕಾಳೇನ ಅಗ್ರಹಾರ
211. ಬೇಗೂರು
212. ನಾಗನಾಥಪುರ
213. ಜರಗನಹಳ್ಳಿ
214. ಪುಟ್ಟೇನಹಳ್ಳಿ
215. ಬಿಳೇಕಹಳ್ಳಿ
216. ಹುಳಿಮಾವು
217. ಕೋಡಿಚಿಕ್ಕನಹಳ್ಳಿ
218. ಬೊಮ್ಮನಹಳ್ಳಿ
219. ಹೊಂಗಸಂದ್ರ
220. ಗಾರೆಭಾವಿಪಾಳ್ಯ
221. ಎಚ್ಎಸ್‌ಆರ್ ಲೇಔಟ್
222. ಇಬ್ಲೂರು
223. ಮಂಗಮ್ಮನಪಾಳ್ಯ
224. ಹೊಸ ರಸ್ತೆ
225. ಕೂಡ್ಲು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.