ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಯ ಪೋಷಕಿಯಿಂದ ಶಾಲೆಯಲ್ಲೇ ಮಸಾಜ್: ಪ್ರಭಾರ ಮುಖ್ಯಶಿಕ್ಷಕ ಅಮಾನತು

Last Updated 22 ಸೆಪ್ಟೆಂಬರ್ 2021, 11:42 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಯನ್ನು ಶಾಲೆಗೆ ಸೇರಿಸಲು ಬಂದ ಪೋಷಕಿಯಿಂದಲೇ, ಕೋದಂಡರಾಮಪುರ ಬಿಬಿಎಂಪಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ಲೋಕೇಶಪ್ಪ ಅವರು ಮಸಾಜ್‌ ಮಾಡಿಸಿಕೊಂಡ ಆರೋಪ ಕೇಳಿಬಂದಿದೆ. ಶನಿವಾರ ನಡೆದ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಿಬಿಎಂಪಿಯು ಲೋಕೇಶಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿದೆ.

ಮಗುವನ್ನು ಶಾಲೆಗೆ ದಾಖಲಿಸಲು ಬಂದ ಮಹಿಳೆಯಲ್ಲಿ ಆಕೆಯ ವೃತ್ತಿಯ ಬಗ್ಗೆ ಲೋಕೇಶ‍ಪ್ಪ ವಿಚಾರಿಸಿದ್ದರು. ಬ್ಯೂಟಿ ಪಾರ್ಲರ್‌ ನಡೆಸುತ್ತಿರುವುದಾಗಿ ಆ ಮಹಿಳೆ ತಿಳಿಸಿದ್ದರು. ಆಗ ಮುಖ್ಯಶಿಕ್ಷಕ ಆ ಮಹಿಳೆಯ ಬಳಿ ಮಸಾಜ್‌ ಮಾಡುವಂತೆ ಒತ್ತಾಯಿಸಿದ್ದರು. ಮಗುವಿನ ಶಿಕ್ಷಣಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಆ ಮಹಿಳೆ ಒಲ್ಲದ ಮನಸ್ಸಿನಿಂದಲೇ ಇದಕ್ಕೆ ಒಪ್ಪಿದ್ದರು.ತರಗತಿ ಕೊಠಡಿಯೊಂದಕ್ಕೆ ಮಹಿಳೆಯನ್ನು ಕರೆದೊಯ್ದ ಮಸಾಜ್ ಮಾಡಿಸಿಕೊಂಡ ಲೋಕೇಶಪ್ಪ ಈ ವೇಳೆ ಆಕೆಯ ಜೊತೆ ಅಶ್ಲೀಲವಾಗಿಯೂ ಮಾತನಾಡಿದ್ದರು ಎಂದು ಗೊತ್ತಾಗಿದೆ.

ಲೋಕೇಶಪ್ಪ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನು ಶಾಲೆಯ ಶಿಕ್ಷಕರೊಬ್ಬರು ಸೆರೆ ಹಿಡಿದಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ವಿಚಾರಿಸಿದಾಗ ಲೋಕೇಶಪ್ಪ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.

‘ಪ್ರೌಢಶಾಲೆಯ ಕಟ್ಟಡವನ್ನು ಖಾಸಗಿ ಕೆಲಸಕ್ಕೆ ಬಳಸಿಕೊಳ್ಳುವ ಮೂಲಕ ಲೋಕೇಶಪ್ಪ ಸರ್ಕಾರಿ ಕೆಲಸದ ಸಮಯದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನ್ವಯ ಅವರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ. ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯಲಿದೆ’ ಎಂದು ಬಿಬಿಎಂಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT