ಶುಕ್ರವಾರ, ಜೂನ್ 18, 2021
21 °C

ಜಿಕೆವಿಕೆಯಲ್ಲಿ 370 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಬಿಬಿಎಂಪಿ ಯಲಹಂಕವಲಯ ವ್ಯಾಪ್ತಿಯ ಜಿಕೆವಿಕೆ ಆವರಣದಲ್ಲಿ 370 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಶಾಸಕರಾದ ಎಸ್.ಆರ್.ವಿಶ್ವನಾಥ್, ಕೃಷ್ಣಬೈರೇಗೌಡ, ಬಿಬಿಎಂಪಿ ಆಯುಕ್ತ ಗೌರವಗುಪ್ತ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದರು.

ಆರೈಕೆ ಕೇಂದ್ರದಲ್ಲಿ ಪುರುಷರಿಗೆ 80, ಮಹಿಳೆಯರಿಗೆ 80, ಸಾಮಾನ್ಯವರ್ಗದವರಿಗೆ 150 ಹಾಗೂ 50 ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಕ್ಕೆ ಎರಡು ಆಂಬುಲೆನ್ಸ್, 12 ವೈದ್ಯರು, 12 ದಾದಿಯರು, 24 ಆರೋಗ್ಯ ಸಹಾಯಕರು, 36 ಮಂದಿ ಸಹಾಯಕ ಸಿಬ್ಬಂದಿ, ಡಾಟಾ ಆಪರೇಟರ್‌ ಹಾಗೂ ಮಾರ್ಷಲ್‌ಗಳನ್ನು ಸಹ ನಿಯೋಜಿಸಲಾಗಿದೆ.

‘ಆರೈಕೆ ಕೇಂದ್ರದಲ್ಲಿ 70 ಐಸಿಯು ಹಾಸಿಗೆ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗಿದ್ದು, ಇದಕ್ಕೆ ಸಹಾಯಮಾಡಲು ಕೆಲವು ದಾನಿಗಳು ಮುಂದೆ ಬಂದಿದ್ದಾರೆ. ಈ ಕೇಂದ್ರ ತೆರೆದಿರುವುದರಿಂದ ಸುತ್ತಮುತ್ತಲ ಹಾಗೂ ಗ್ರಾಮೀಣಭಾಗದ ಜನರಿಗೆ ಅನುಕೂಲವಾಗಲಿದೆ’ ಎಂದು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ತಿಳಿಸಿದರು.

ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು