ಬೆಂಗಳೂರು: ನಿವೇಶನ ಮತ್ತು ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ಬದಲಿಸಿಲ್ಲ. ಆದರೆ, ಫ್ಲ್ಯಾಟ್ ಹಂಚಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ನಿಯಮಗಳು ಇಲ್ಲದ ಕಾರಣ 2018ರ ಮಾರ್ಚ್ 23ರ ಆದೇಶದಂತೆ ರಾಜ್ಯದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ವಾಸವಿರುವ ದೃಢೀಕರಣ ಪ್ರಮಾಣಪತ್ರ ಹೊಂದಿರುವವರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಪಷ್ಟಪಡಿಸಿದೆ.

ಪ್ರಸ್ತುತ ಎರಡು ಸಾವಿರಕ್ಕಿಂತ ಹೆಚ್ಚು ಫ್ಲ್ಯಾಟ್, ವಿಲ್ಲಾಗಳು ಇವೆ. ಆನ್ಲೈನ್ ಮೂಲಕ ಅಥವಾ ಭೌತಿಕವಾಗಿ ಅರ್ಜಿ ಸಲ್ಲಿಸಿದವರು ನಿಯಮಾವಳಿ ಪ್ರಕಾರ ಅರ್ಹತೆ ಹೊಂದಿರುವ ಬಗ್ಗೆ ಪರಿಶೀಲಿಸಿ ಫ್ಲ್ಯಾಟ್, ವಿಲ್ಲಾಗಳನ್ನು ಹಂಚಿಕೆ ಮಾಡಿ ಶುದ್ಧ ಕ್ರಯಪತ್ರ ನೀಡಲಾಗುತ್ತದೆ.

ಬಿಡಿಎ ಕಾಯ್ದೆಯಲ್ಲಿನ ನಿಯಮಗಳಂತೆ ನಿವೇಶನಗಳನ್ನು ಪಡೆಯುವವರು, ಅರ್ಜಿ ಸಲ್ಲಿಸುವವರು ಹತ್ತು ವರ್ಷ ಕರ್ನಾಟಕದ ನಿವಾಸಿಗಳಾಗಿರಬೇಕೆಂಬ ಷರತ್ತನ್ನು ಸಡಿಲಿಸಿಲ್ಲ ಎಂದು ಹೇಳಿದೆ.

ಪ್ರಾಧಿಕಾರವು ನಿವೇಶನ, ಮನೆಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿರುತ್ತದೆ. ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಪ್ರಾಧಿಕಾರದ ಕಾಯ್ದೆ 1984ರ (ನಿವೇಶನ ಹಂಚಿಕೆ) ನಿಯಮ 10(2)ರಲ್ಲಿ ಇರುವಂತೆ ಪ್ರಸ್ತುತ ನಿಯಮಗಳು ಚಾಲ್ತಿಯಲ್ಲಿರುತ್ತವೆ. ನಿವೇಶನ ಹಂಚಿಕೆ ಸಂಬಂಧ ಕಾಯ್ದೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.