ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಮೇ 17ರಂದು ಕೊಮ್ಮಘಟ್ಟದಲ್ಲಿ ಫ್ಲ್ಯಾಟ್ ಮೇಳ ಆಯೋಜಿಸಿದೆ.

ಈ ಮೇಳದಲ್ಲಿ ಕೊಮ್ಮಘಟ್ಟ, ಕಣಮಿಣಿಕೆ, ಕೋನದಾಸಪುರ ಸಹಿತ ಇತರೆ ಕಡೆಗಳಲ್ಲಿ ನಿರ್ಮಿಸಿರುವ ಫ್ಲ್ಯಾಟ್ ಯೋಜನೆಯಲ್ಲಿ ಬಾಕಿ ಉಳಿದಿರುವ ಘಟಕಗಳನ್ನು ಮಾರಾಟ ಮಾಡಲಾಗುತ್ತದೆ.

ಕೊಮ್ಮಘಟ್ಟದಲ್ಲಿರುವ ಬಿಡಿಎ ವಸತಿ ಸಮ್ಮುಚ್ಚಯದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೂ ಮೇಳ ನಡೆಯಲಿದೆ. ಸದ್ಯ 1176 ಫ್ಲ್ಯಾಟ್ಗಳು ಮಾರಾಟಕ್ಕೆ ಲಭ್ಯವಿದ್ದು, ಆಯಾ ಫ್ಲ್ಯಾಟ್ ಮೌಲ್ಯದ ಶೇಕಡಾ 25ರಷ್ಟು ಹಣವನ್ನು ಆರಂಭಿಕ ಠೇವಣಿಯಾಗಿ ಪಾವತಿಸಿದರೆ ಸ್ಥಳದಲ್ಲೇ ಖರೀದಿದಾರರಿಗೆ ಹಂಚಿಕೆ ಪತ್ರ ನೀಡಲಾಗುತ್ತದೆ ಎಂದು ಬಿಡಿಎ ವಸತಿ ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜೆ.ಕೆ.ಭುನವೇಶ್ವರ್ ತಿಳಿಸಿದರು.

11.50 ಎಕರೆಗಳಷ್ಟು ವಿಸ್ತಾರವಾದ ಭೂಪ್ರದೇಶದಲ್ಲಿ ಕೊಮ್ಮಘಟ್ಟ ವಸತಿ ಯೋಜನೆಗಳು ಫೇಸ್-1, 2 ಮತ್ತು 3 ತಲೆಯೆತ್ತಿದ್ದು, ಸುತ್ತಲೂ ಹಸಿರು ವಾತಾವರಣ ಹೊಂದಿದೆ. ನಿರ್ಮಾಣ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಹಸಿರು ಪರಿಕಲ್ಪನೆ ಅಳವಡಿಸಿಕೊಳ್ಳಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ 1.6 ಕಿ.ಮೀ. ದೂರದಲ್ಲಿದೆ. ಚಲ್ಲಘಟ್ಟ ಮೆಟ್ರೊದಿಂದ 2.5 ಕಿ.ಮೀ.ಗಿಂತ ಕಡಿಮೆ ದೂರದಲ್ಲಿದೆ. ರೇರಾ ಪ್ರಮಾಣೀಕರಿಸಿದೆ’ ಎಂದು ಹೇಳಿದರು.

ಪ್ರಸ್ತುತ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಜಲಮಂಡಳಿಯಿಂದ ನೀರು ಸರಬರಾಜು ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಸಾಲ ಸೌಲಭ್ಯ ಪಡೆಯುವವರಿಗಾಗಿ ನಾನಾ ಬ್ಯಾಂಕ್ಗಳು ಕೂಡ ಸ್ಥಳದಲ್ಲಿಯೇ ಇರಲಿವೆ ಎಂದರು.

1176 ಫ್ಲ್ಯಾಟ್ಗಳ ದರ

ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಕೊಮ್ಮಘಟ್ಟ ಎನ್ಪಿಕೆಎಲ್ ಫೇಸ್-1: 3 ಬಿಎಚ್ಕೆನ 480 ಮನೆಗಳಿದ್ದು (1314.54 ಚದರಡಿ ವಿಸ್ತೀರ್ಣ) ₹65.20 ಲಕ್ಷ

ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಕೊಮ್ಮಘಟ್ಟ ಎನ್ಪಿಕೆಎಲ್ ಫೇಸ್-2 ಬಿಎಚ್ಕೆನ 360 ಮನೆಗಳಿದ್ದು (978 ಚದರ ಅಡಿ ವಿಸ್ತೀರ್ಣ) ₹53.85 ಲಕ್ಷ

ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಕೊಮ್ಮಘಟ್ಟ ಎನ್ಪಿಕೆಎಲ್ ಫೇಸ್-3 : 2 ಬಿಎಚ್ಕೆಯ 336 ಮನೆಗಳಿದ್ದು (904.27 ಚದರ ಅಡಿ) ₹48.70 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.