ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಬಡಾವಣೆ: 31 ಎಂಜಿನಿಯರ್‌ಗಳ ವಿರುದ್ಧ ಕ್ರಮ

ಬಿಡಿಎ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ: ಸಿಎ ನಿವೇಶನ ಪರಿವರ್ತನೆ ಪ್ರಕರಣ
Last Updated 6 ಫೆಬ್ರುವರಿ 2023, 21:25 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಗಳ (ಸಿಎ) ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿದ 31 ಎಂಜಿನಿಯರ್‌ ಹಾಗೂ ಏಳು ಸರ್ವೇಯರ್‌ಗಳಿಗೆ ಸಂಕಷ್ಟ ಎದುರಾಗಿದೆ. ಕೆಲವು ಎಂಜಿನಿಯರ್‌ ಹಾಗೂ ದಲ್ಲಾಳಿಗಳು ಬಡಾವಣೆಯ ನಕ್ಷೆಯನ್ನು ಬದಲಿಸಲು ಒತ್ತಡ ಹಾಕಿದ್ದರು ಎಂದು ಖಾಸಗಿ ಸಂಸ್ಥೆ ಸಿದ್ಧಪಡಿಸಿದ ಆಂತರಿಕ ವರದಿ ತಿಳಿಸಿದೆ.

ವರದಿಯ ಪ್ರಾಥಮಿಕ ಅಂಶಗಳ ಪ್ರಕಾರ, ಬಿಡಿಎ ಅಕ್ರಮವಾಗಿ ಕನಿಷ್ಠ 12 ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿದ್ದು, ಇದು ಕೆಟಿಸಿಪಿ ಕಾಯ್ದೆ ಹಾಗೂ ಸುಪ್ರೀಂಕೋರ್ಟ್‌ನ ಇತ್ತೀಚಿನ ಆದೇಶ ಉಲ್ಲಂಘನೆಯಾಗಿದೆ. ಬಡಾವಣೆಯಲ್ಲಿ ಒಂದು ಬಾರಿ ಸಿಎ ನಿವೇಶನ, ಉದ್ಯಾನ ಅಥವಾ ಮೈದಾನ ಎಂದು ಅಧಿಸೂಚನೆ ಆದರೆ ಅದನ್ನು ಬದಲಿಸುವ ಅಧಿಕಾರ ಎಂಜಿನಿಯರ್‌ಗೆ ಇರುವುದಿಲ್ಲ.

ಸಿಎ ನಿವೇಶನಗಳಲ್ಲದೆ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿಯಾಗಬೇಕಾದ 100 ಅಡಿ ಮತ್ತು 80 ಅಡಿ ರಸ್ತೆಯ ಸುತ್ತಮುತ್ತಲಿನ 180 ಎಕರೆ ಪ್ರದೇಶದ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಎಂಜಿನಿಯರ್‌ಗಳು
ಪರಿವರ್ತಿಸಿದ್ದಾರೆ.

‘ಸಿಎ ನಿವೇಶನ ಹಾಗೂ ವಾಣಿಜ್ಯ ಬಳಕೆಯ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿರುವ ಎಂಜಿನಿಯರ್‌ಗಳ ಮೇಲೆ ತನಿಖೆ ಆಧರಿಸಿ ಎಫ್‌ಐಆರ್‌ ದಾಖಲಿಸಲಾಗುತ್ತದೆ. ರೈತರಿಗೆ ಪರಿಹಾರ ‌ರೂಪದಲ್ಲಿ ನೀಡಲಾಗಿರುವ ನಿವೇಶನಗಳನ್ನು ‌ಪರಿವರ್ತಿಸಿರುವುದು ಅಕ್ರಮ’ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್. ವಿಶ್ವನಾಥ್‌ ಹೇಳಿದರು.

‘ನಿವೇಶನ ಪಡೆದವರೂ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಸಿಎ ನಿವೇಶನಗಳನ್ನು ಬೇರೆ ಪ್ರದೇಶಗಳಲ್ಲಿ ಗೊತ್ತುಪಡಿಸುವುದು (ಮಾರ್ಕಿಂಗ್) ಇದಕ್ಕೆ ಇರುವ ಒಂದು ಪರಿಹಾರ’ ಎಂದರು.

2019ರ ಡಿಸೆಂಬರ್‌ನಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಬಿಡಿ
ಎಗೆ ಸಲ್ಲಿಸಲಾಗಿದ್ದ ದೂರಿನಿಂದ ಈ ಅಕ್ರಮ ತಿಳಿದುಬಂದಿತ್ತು. ‘ಬಿಡಿಎ ಎಂಜಿನಿಯರಿಂಗ್‌ ವರ್ಗದ ವರದಿ ಪ್ರಕಾರ ತನಿಖಾ ಸಂಸ್ಥೆಗೆ ಇದನ್ನು ವಹಿಸಲಾಗುವುದು’ ಎಂದು ಬಿಡಿಎ ಆಯುಕ್ತ ಕುಮಾರ ನಾಯಕ್‌ ತಿಳಿಸಿದರು.

ವಸತಿ ನಿವೇಶನವಾದ ಸಿಎ ನಿವೇಶನಗಳ ವಿವರ

l 31,949 ಚ.ಮೀ., ಬ್ಲಾಕ್‌ 5, ಸೆಕ್ಟರ್‌ 1 (ಮೆಟ್ರೋ, ಬಿಎಂಟಿಸಿ ಡಿಪೊ)

l 1,528 ಚ.ಮೀ., 3,172 ಚ.ಮೀ., ಬ್ಲಾಕ್‌ 7, ಸೆಕ್ಟರ್‌ ಬಿ(ಸಾಂಸ್ಕೃತಿಕ ಚಟುವಟಿಕೆ)

l 10,545 ಚ.ಮೀ., 12,468 ಚ.ಮೀ ಮತ್ರು 9,636 ಚ.ಮೀ ವಾಣಿಜ್ಯ ಪ್ರದೇಶ, ಬ್ಲಾಕ್‌ 7, ಸೆಕ್ಟರ್‌ ಇ

l 15,202 ಚ.ಮೀ. ವಾಣಿಜ್ಯ ಪ್ರದೇಶ ಬ್ಲಾಕ್‌ 4, ಸೆಕ್ಟರ್‌ ಡಿ– 3,852 ಚ.ಮೀಗೆ ಕಡಿತ

l ಬ್ಲಾಕ್‌ 5 ಸೆಕ್ಟರ್‌ 1ರ ವಾಣಿಜ್ಯ ನಿವೇಶನ ಎಸ್‌ಟಿಪಿ ಪಂಪಿಂಗ್‌ ಸ್ಟೇಷನ್‌ಗೆ ಬಳಕೆ

l ಸೆಕ್ಟರ್‌ 7ರ ವಾಣಿಜ್ಯ ನಿವೇಶನಕ್ಕೆ ರಸ್ತೆ ಸಂಪರ್ಕ ನಿರ್ಬಂಧಿಸಲಾಗಿದೆ

l ಸೆಕ್ಟರ್‌ ಇನಲ್ಲಿರುವ ಬಹುತೇಕ ಸಿಎ ನಿವೇಶನಗಳನ್ನು ವಸತಿ ನಿವೇಶನ
ಗಳನ್ನಾಗಿ ಪರಿವರ್ತಿಸಲಾಗಿದೆ

l ಬ್ಲಾಕ್ 4 ಸೆಕ್ಟರ್‌ ಸಿನಲ್ಲಿ ಸಿಎ ನಿವೇಶನಗಳನ್ನು ಶೇ 35ರಷ್ಟು
ಕಡಿತಗೊಳಿಸಲಾಗಿದೆ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT