ಬೆಂಗಳೂರು: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1) ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನುಗಳ ದರ ನಿಗದಿಗೆ ಸಂಬಂಧಿಸಿದಂತೆ ಜಮೀನು ಮಾಲೀಕರೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಡೆಸಿದ ಸಂಧಾನ ಸೂತ್ರ ಸಭೆ ಮತ್ತೊಮ್ಮೆ ವಿಫಲವಾಗಿದೆ.

ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ಮಾಡಬೇಕು ಹಾಗೂ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸುವಂತೆ ಜಮೀನು ಮಾಲೀಕರು ಪಟ್ಟು ಹಿಡಿದಿದ್ದರೆ, ಭೂ ಸ್ವಾಧೀನ ಕಾಯ್ದೆ 1894ರ ಅನ್ವಯ ಸಂಧಾನ ಸೂತ್ರದಡಿ ಪರಿಹಾರ ನೀಡುವುದಾಗಿ ಬಿಡಿಎ ಹೇಳುತ್ತಿದೆ. ಹಾಗಾಗಿ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದೆ.

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ರೈತರೊಂದಿಗೆ ಚರ್ಚಿಸಿ ದರ ನಿಗದಿ ಮಾಡಲು ಎಂಟು ಮಂದಿ ವಿಶೇಷ ಭೂಸ್ವಾಧೀನಾಧಿಕಾರಿಗಳ ತಂಡವನ್ನು ಪ್ರಾಧಿಕಾರ ರಚಿಸಿತ್ತು. ಎರಡು ದಿನ 66 ಗ್ರಾಮಗಳ ವ್ಯಾಪ್ತಿಯ ಜಮೀನು ಮಾಲೀಕರ ಅಹವಾಲು ಆಲಿಸಿತು.

ಯಲಹಂಕ ಮಿನಿ ವಿಧಾನಸೌಧ, ವರ್ತೂರು ನಾಡ ಕಚೇರಿ, ಹುಸ್ಕೂರು ಕಂದಾಯ ಕಚೇರಿ, ಬ್ಯಾಲಕೆರೆ ಗ್ರಾಮ ಪಂಚಾಯಿತಿ, ಅವಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಕಾಡುಗೋಡಿ ಬಿಬಿಎಂಪಿ ಕಚೇರಿ ಸೇರಿದಂತೆ ಎಂಟು ಕಡೆಗಳಲ್ಲಿ 74 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಸುಮಾರು ಹಳ್ಳಿಗಳ ಭೂಮಾಲೀಕರೊಂದಿಗೆ ಪರಿಹಾರ ನಿಗದಿ ಸಂಬಂಧ ಚರ್ಚಿಸಿದರೂ ಫಲಪ್ರದವಾಗಿಲ್ಲ.

2024-25ರ ಮಾರ್ಗಸೂಚಿಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ಎರಡರಷ್ಟು, ಗ್ರಾಮೀಣ ಪ್ರದೇಶಗಳಿಗೆ ಮೂರರಷ್ಟು ಪರಿಹಾರ ನೀಡಲು ಮುಂದಾಗಿದೆ. ಆದರೆ, ಮಾರುಕಟ್ಟೆ ಮೌಲ್ಯ ಆಧರಿಸಿ ಪರಿಹಾರ ನಿಗದಿಪಡಿಸುವಂತೆ ರೈತರು ಪಟ್ಟುಹಿಡಿದಿದ್ದಾರೆ. ಸದ್ಯ ಬಿಡಿಎ ನಿಗದಿಪಡಿಸಿದ ಪರಿಹಾರ ಮೊತ್ತ ಮಾರುಕಟ್ಟೆ ದರದ ಶೇಕಡ 25ಕ್ಕಿಂತಲೂ ಕಡಿಮೆ ಇದೆ ಎಂಬುದು ರೈತರ ಆಕ್ಷೇಪವಾಗಿದೆ.

ಆಯಾ ಗ್ರಾಮವಾರು ಮಾರ್ಗಸೂಚಿ ದರವನ್ನು ಗಮನದಲ್ಲಿಟ್ಟುಕೊಂಡು ಸಂಧಾನ ಸೂತ್ರದ ಮೂಲಕ ಭೂಸ್ವಾಧೀನ ಕಾಯಿದೆ 1984ರ ಅಡಿ ಪರಿಹಾರ ನೀಡಲು ಬಿಡಿಎ ಉದ್ದೇಶಿಸಿದೆ. ಆದರೆ, ಇದಕ್ಕೆ ಭೂ ಮಾಲೀಕರು ಒಪ್ಪುತ್ತಿಲ್ಲ.

ಕೆಲವೆಡೆ ರೈತರು ಸಭೆಗೆ ವಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಚಿಕ್ಕಬಾಣಾವರ ಪುರಸಭೆ ಬಳಿ ಆಯೋಜಿಸಿದ್ದ ಸಭೆಯಲ್ಲಿ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ಸಭೆ ಆಯೋಜನೆ ಕುರಿತು ನೋಟಿಸ್ ನೀಡಿಲ್ಲ. ಮಧ್ಯವರ್ತಿಗಳ ಮೂಲಕ ಸಭೆ ಆಯೋಜಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಯೋಜನೆ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ರೈತರನ್ನು ಮನವೊಲಿಸಲು ಸಂಧಾನ ಸಭೆಯನ್ನು ಈ ಹಿಂದೆಯೂ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಈಗಲೂ ಅದೇ ಸ್ಥಿತಿ ಮುಂದುವರಿದಿದೆ.

‘ಪ್ರತಿ ಎಕರೆಗೆ ₹1.85 ಕೋಟಿ ಪರಿಹಾರ ನಿಗದಿಪಡಿಸಲಾಗಿದ್ದು, ಇದರ ಮೂರು ಪಟ್ಟು ಅಂದರೆ ಪ್ರತಿ ಎಕರೆಗೆ ₹5.55 ಕೋಟಿ ನೀಡಲು ಬಿಡಿಎ ಸಿದ್ಧವಿದೆ. ಆದರೆ, ಸದ್ಯ ಇಲ್ಲಿ ಅಂದಾಜು ₹10 ಕೋಟಿಯಿಂದ ₹15 ಕೋಟಿ ಮಾರುಕಟ್ಟೆ ಮೌಲ್ಯವಿದೆ. ಬಿಬಿಸಿ ಯೋಜನೆಗೆ ಜಮೀನು ನೀಡುವ ಭೂ ಮಾಲೀಕರಿಗೆ ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ಮಾಡಬೇಕು. ಈ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕು. ಇದಕ್ಕೆ ಬಿಡಿಎ ಒಪ್ಪದಿದ್ದರೆ ನಿರಾಕ್ಷೇಪಣಾ (ಎನ್ಒಸಿ) ಪತ್ರ ಕೊಡಲಿ’ ಎಂದು ಜಮೀನು ಮಾಲೀಕರು ಹೇಳಿದರು.

‘ಮಹಾನಗರ ಯೋಜನಾ ಸಮಿತಿ (ಎಂಪಿಸಿ)ಆಗಬೇಕು. ಭೂಮಿಯ ಬೆಲೆ ನಿಗದಿ ಸಮಿತಿಯಲ್ಲಿ ಭೂ ಮಾಲೀಕರು ಮತ್ತು ಅನುಭವಿ ನಗರ ಯೋಜನಾ ತಜ್ಞರು ಇರಬೇಕು. ನ್ಯಾಯಯುತ ಪುನರ್ವಸತಿ ಮತ್ತು ಪುನರ್ವಸತಿ ಪರಿಹಾರ ನೀಡಬೇಕು. ಭೂಮಿ ನೀಡುವ ರೈತರ ಕುಟುಂಬದಲ್ಲಿಒಬ್ಬರಿಗೆ ಕಡ್ಡಾಯವಾಗಿ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಬಿಬಿಸಿ ಯೋಜನೆಗೆ 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಈವರೆಗೂ ಯೋಜನೆ ಅನುಷ್ಠಾನಗೊಂಡಿಲ್ಲ. ಬೆರಳಣಿಕೆಯಷ್ಟು ಜಮೀನಿಗೆ ಪರಿಹಾರ ನೀಡಲಾಗಿದ್ದು, ಆ ಜಮೀನನ್ನೂ ಬಿಡಿಎ ವಶಕ್ಕೆ ಪಡೆದುಕೊಂಡಿಲ್ಲ. 2023ರ ಮಾರ್ಗಸೂಚಿ ದರವು ಎಕರೆಗೆ ₹5.50 ಕೋಟಿ ಇದೆ. ಆದರೆ, ₹4.50 ಕೋಟಿ ನೀಡಲು ನಿರ್ಧರಿಸಿದೆ. ಮಾರ್ಗಸೂಚಿ ದರವನ್ನು ಪರಿಷ್ಕರಿಸಿ, ಹೆಚ್ಚಿಸುವ ಬದಲು ಕಡಿಮೆ ಮಾಡಲಾಗಿದೆ. ಹಾಗಾಗಿ ಯೋಜನೆ ರದ್ದುಗೊಳಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸಬೇಕು. ನ್ಯಾಯಬದ್ಧ ಪರಿಹಾರ, ಪುನರ್ವಸತಿ ಕಲ್ಪಿಸಬೇಕು. ಈ ಯೋಜನೆ ವಿರುದ್ಧ ರೈತರು ನ್ಯಾಯಾಲಯದಲ್ಲಿ 600 ಪ್ರಕರಣ ದಾಖಲಿಸಿದ್ದು, ವಿಚಾರಣೆ ಹಂತದಲ್ಲಿದೆ’ ಎಂದು ಸೂಲಿಕುಂಟೆ ರೈತ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘1894ರ ಕಾಯಿದೆಯಂತೆ ಪರಿಹಾರ ನೀಡಲು ಅವಕಾಶವಿಲ್ಲ ಎಂದು 2013ರ ಕಾಯ್ದೆ ಎರಡನ್ನೂ ಸಮತೋಲನ ಮಾಡಿ ಪರಿಹಾರ ನಿಗದಿಪಡಿಸಿದೆ. ಇಪ್ಪತ್ತು ವರ್ಷದ ಹಳೆಯ ಯೋಜನೆ ಇದಾಗಿದೆ. ಸುಪ್ರಿಂಕೋರ್ಟ್ ತೀರ್ಪಿನ ಅನ್ವಯ ಬಿಡಿಎ ಕಾಯ್ದೆ-1976 ಅಡಿಯ ಅಧಿಸೂಚಿತ ಜಮೀನುಗಳಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರ ಹಕ್ಕು, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಾಯಿದೆ-2013 ಅನ್ವಯವಾಗುವುದಿಲ್ಲ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

74 ಕಿ.ಮೀ. ಉದ್ದ

ಬಿಬಿಸಿ ನಿರ್ಮಾಣಕ್ಕೆ 2557 ಎಕರೆ ಭೂಮಿಯ ಅಗತ್ಯವಿದೆ. 74 ಕಿ.ಮೀ. ಉದ್ದದ ಈ ರಸ್ತೆಯು 77 ಗ್ರಾಮಗಳಲ್ಲಿ ಹಾದು ಹೋಗಲಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ 10 ಪಥದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲಾಗುತ್ತಿದೆ. ಈ ರಸ್ತೆ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಇದು ಪ್ರವೇಶ ನಿಯಂತ್ರಿತ ಎಕ್ಸ್ಪ್ರೆಸ್ವೇ ಆಗಿದ್ದು ಹೆಸರಘಟ್ಟ ರಸ್ತೆ ದೊಡ್ಡಬಳ್ಳಾಪುರ ರಸ್ತೆ ಬಳ್ಳಾರಿ ರಸ್ತೆ ಹೆಣ್ಣೂರು ರಸ್ತೆ ಹಳೆ ಮದ್ರಾಸ್ ರಸ್ತೆ ಹೊಸಕೋಟೆ ರಸ್ತೆ ಹಾಗೂ ಸರ್ಜಾಪುರ ಸೇರಿದಂತೆ ಹಲವು ಗ್ರಾಮಗಳ ಮೂಲಕ ಹಾದು ಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.