ಸೋಮವಾರ, ಜೂನ್ 21, 2021
29 °C

ಹಾಸಿಗೆ ಬ್ಲಾಕ್ ದಂಧೆ: 3 ಆಸ್ಪತ್ರೆಗಳಲ್ಲಿ ಅಕ್ರಮ ಬುಕಿಂಗ್ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾಸಿಗೆ ಬ್ಲಾಕಿಂಗ್ ದಂಧೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು, ಅಕ್ರಮವಾಗಿ ಹಾಸಿಗೆಗಳನ್ನು ಬುಕ್‌ ಮಾಡುತ್ತಿದ್ದ ಮೂರು ಆಸ್ಪತ್ರೆಗಳನ್ನು ಪತ್ತೆ ಹಚ್ಚಿದ್ದಾರೆ.

‘ಸಿಸಿಬಿ ಅಧಿಕಾರಿಗಳು ಶೋಧಿಸಿರುವ ಮೂರೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಾಗೂ ‘ಆರೋಗ್ಯ ಮಿತ್ರ’ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖೆ ಮುಂದುವರಿದಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ದಂಧೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ವೈದ್ಯರು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಈಗಾಗಲೇ ಬಂಧಿಸಿ, ಹಲವರನ್ನು ವಿಚಾರಣೆ ನಡೆಸಿದೆ. ‌ತನಿಖೆ ಚುರುಕುಗೊಳಿಸಿದ್ದ ಸಿಸಿಬಿ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿ ನಗರದ 16 ಆಸ್ಪತ್ರೆಗಳಲ್ಲಿ ಶನಿವಾರ ಶೋಧ ನಡೆಸಿದ್ದರು.

4 ಖಾಸಗಿ ಬಸ್‌ ಜಪ್ತಿ
ಬೆಂಗಳೂರು:
ಕೋವಿಡ್‌ ನಿಯಮಾವಳಿ ಉಲ್ಲಂಘಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ನಾಲ್ಕು ಖಾಸಗಿ ಬಸ್‌ಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ಜಪ್ತಿ ಮಾಡಿದ್ದಾರೆ.

‘ಲಾಕ್‌ಡೌನ್‌ ವೇಳೆಯಲ್ಲಿ ಯಾವುದೇ ಬಸ್‌ಗಳು ಕಾರ್ಯಾಚರಣೆ ನಡೆಸುವಂತಿಲ್ಲ. ಆದರೆ, ಕೆಲ ಖಾಸಗಿ ಬಸ್‌ಗಳು ಅಕ್ರಮವಾಗಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವು’. ‌

‘ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್‌ ನೇತೃತ್ವದ ತಂಡಗಳು ಬಾಗೇಪಲ್ಲಿ, ಅತ್ತಿಬೆಲೆ ಹಾಗೂ ಬಳ್ಳಾರಿ ರಸ್ತೆಯ ಎಸ್ಟೀಮ್‌ ಮಾಲ್‌ ಬಳಿ ಭಾನುವಾರ ದಾಳಿ ನಡೆಸಿದಾಗ ಒಟ್ಟು ನಾಲ್ಕು ಖಾಸಗಿ ಬಸ್‌ಗಳನ್ನು ಜಪ್ತಿ ಮಾಡಲಾಗಿದೆ‘ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು