ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಬೆನಕಾ ಗೋಲ್ಡ್‌ ಕಂಪನಿ ಕಚೇರಿಯಲ್ಲಿ ಕಳ್ಳತನ; ಕ್ಯಾಮೆರಾ DVR ಪುಡಿ

Published 15 ಫೆಬ್ರುವರಿ 2024, 15:55 IST
Last Updated 15 ಫೆಬ್ರುವರಿ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿ ನೆಟ್ಟಕಲ್ಲಪ್ಪ ವೃತ್ತ ಬಳಿ ಇರುವ ಬೆನಕಾ ಗೋಲ್ಡ್ ಕಂಪನಿ ಕಚೇರಿಯಲ್ಲಿ ಕಳ್ಳತನ ನಡೆದಿದ್ದು, ಕೃತ್ಯದ ಸುಳಿವು ಸಿಗಬಾರದೆಂದು ಕಳ್ಳರು ಸಿ.ಸಿ.ಟಿ.ವಿ ಕ್ಯಾಮೆರಾದ ಡಿವಿಆರ್ ಒಡೆದು ಹಾಕಿ ಪುಡಿ ಮಾಡಿ ಪರಾರಿಯಾಗಿದ್ದಾರೆ.

‘ಬುಧವಾರ ರಾತ್ರಿ ನಡೆದಿರುವ ಕಳ್ಳತನ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಲಸಗಾರರು ಕಚೇರಿ ಬಾಗಿಲು ಬಂದ್ ಮಾಡಿ ರಾತ್ರಿ ಮನೆಗೆ ಹೋಗಿದ್ದರು. ತಡರಾತ್ರಿ ಕಚೇರಿ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ್ದ ಕಳ್ಳರು, ಹಲವೆಡೆ ಹುಡುಕಾಡಿದ್ದಾರೆ. ಸುಮಾರು 250 ಗ್ರಾಂ ಚಿನ್ನ, 17 ಕೆ.ಜಿ ಬೆಳ್ಳಿ ಹಾಗೂ ₹ 1.8 ಲಕ್ಷ ನಗದು ಕದ್ದುಕೊಂಡು ಪರಾರಿಯಾಗಿದ್ದಾರೆ.’

‘ಮುಂಜಾಗ್ರತಾ ಕ್ರಮವಾಗಿ ಕಚೇರಿ ಒಳಗೆ ಹಾಗೂ ಹೊರಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ದೃಶ್ಯಗಳು ಸೆರೆಯಾಗುವ ಡಿವಿಆರ್‌ ಉಪಕರಣವನ್ನು ಆರೋಪಿಗಳು ಒಡೆದು ಹಾಕಿದ್ದಾರೆ. ಡಿವಿಆರ್ ಪೂರ್ತಿ ಪುಡಿ ಪುಡಿ ಆಗಿದೆ. ಹಲವು ದಿನಗಳಿಂದ ನಿಗಾ ವಹಿಸಿ ಆರೋಪಿಗಳು ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ಪೊಲೀಸರು ತಿಳಿಸಿದರು.

‘ಜನರು ಚಿನ್ನವನ್ನು ಕಂಪನಿಯಲ್ಲಿ ಅಡವಿಟ್ಟಿದ್ದರು. ಅದೇ ಚಿನ್ನ ಕಳ್ಳತನ ಆಗಿರುವುದಾಗಿ ಕೆಲಸಗಾರರು ಹೇಳುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT