ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್–2 ವಿಶ್ವದಲ್ಲೇ ಅತ್ಯಂತ ಸುಂದರ: ಯುನೆಸ್ಕೊ

Published 22 ಡಿಸೆಂಬರ್ 2023, 7:20 IST
Last Updated 22 ಡಿಸೆಂಬರ್ 2023, 7:20 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ –2 ವಿಶ್ವದ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದು ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ಯುನೆಸ್ಕೊದ ಪ್ರಿಕ್ಸ್ ವೆರ್ಸೆಲೈಸ್, ‘ವಿಶ್ವ ಶ್ರೇಷ್ಠ ಒಳಾಂಗಣಕ್ಕೆ ವಿಶೇಷ ಬಹುಮಾನ–2023’ ನೀಡಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಗುರುವಾರ ತಿಳಿಸಿದೆ.

ಇಂಥ ಗೌರವಕ್ಕೆ ಪಾತ್ರವಾದ ದೇಶದ ಏಕೈಕ ವಿಮಾನ ನಿಲ್ದಾಣವೂ ಹೌದು.

2,55,661 ಚದರ ಮೀಟರ್‌ ವಿಸ್ತೀರ್ಣದ ಈ ಟರ್ಮಿನಲ್‌ನಲ್ಲಿ, ತೂಗುವ ಉದ್ಯಾನ ಹಾಗೂ ಹೊರಾಂಗಣ ಉದ್ಯಾನ ಇದೆ. ಇದರಲ್ಲಿ ಪ್ರಯಾಣಿಕರು ನಡೆದಾಡಬಹುದು ಕೂಡ. ಇಡೀ ಏರ್‌ಪೋರ್ಟ್‌ನಲ್ಲಿ ಮರುಬಳಕೆ ಮಾಡಬಹುದಾದ ಇಂಧನವನ್ನು ಬಳಸಲಾಗಿದೆ.

ಟರ್ಮಿನಲ್ –2ರ ಮೊದಲ ಹಂತವನ್ನು 2022ರ ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದರು. ವಾರ್ಷಿಕವಾಗಿ 2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT