ಬೆಂಗಳೂರು: ಶಾಲಾ ವಾಹನದ ಮೇಲೆ ಕಲ್ಲು ಎಸೆದು, ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಚಿಕ್ಕಗೊಲ್ಲರಹಟ್ಟಿ ನಿವಾಸಿ, ಚಾಲಕ ಸುರೇಶ್ ಅವರ ದೂರು ಆಧರಿಸಿ ಆರು ಮಂದಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಾರ್ಚ್ 14ರಂದು ದೊಡ್ಡಗೊಲ್ಲರಹಟ್ಟಿಯ ರಾಗಿ ಮಿಲ್ ರಸ್ತೆಯಲ್ಲಿ ಸಮೀಪದ ವಾಟರ್ ಬಾಟಲ್ ಕಂಪನಿಯ ಉದ್ಯೋಗಿಗಳು ಹೋಳಿ ಆಟವಾಡುತ್ತಿದ್ದರು. ಇದೇ ಮಾರ್ಗವಾಗಿ ಬಂದ ಸುರೇಶ್ ಅವರ ವಾಹನಕ್ಕೆ ಅಡ್ಡ ಬಂದರು. ಹಾರ್ನ್ ಮಾಡಿದರೂ ಲೆಕ್ಕಿಸದೆ ಕುಣಿಯುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಶಾಲಾ ವಾಹನಕ್ಕೆ ಕಲ್ಲು ಎಸೆದು, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.