ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಮೊದಲ ಖಾಸಗಿ ಸ್ವದೇಶಿ ನಿರ್ಮಿತ ಮಾನವರಹಿತ ‘ಯುದ್ಧ ಬಾಂಬರ್‌’ ಹಾರಾಟ ಯಶಸ್ವಿ

Published : 6 ಸೆಪ್ಟೆಂಬರ್ 2024, 12:15 IST
Last Updated : 6 ಸೆಪ್ಟೆಂಬರ್ 2024, 12:15 IST
ಫಾಲೋ ಮಾಡಿ
Comments

ಬೆಂಗಳೂರು: ದೇಶದ ಮೊದಲ ಖಾಸಗಿ ಸ್ವದೇಶಿ ನಿರ್ಮಿತ ಮಾನವರಹಿತ ‘FWD 200B’ ಯುದ್ಧ ಬಾಂಬರ್‌ನ ಚೊಚ್ಚಲ ಹಾರಾಟ ಯಶಸ್ವಿಯಾಗಿದೆ ಎಂದು ಫ್ಲೈಯಿಂಗ್ ವೆಡ್ಜ್ ಕಂಪನಿ ಘೋಷಿಸಿದೆ.

ಫ್ಲೈಯಿಂಗ್‌ ವೆಡ್ಜ್‌ ಡಿಫೆನ್ಸ್‌ ಅಂಡ್‌ ಏರೋಸ್ಪೇಸ್‌ ಕಂಪನಿಯ ಸಂಸ್ಥಾಪಕ ಸುಹಾಸ್‌ ತೇಜಸ್ಕಂದ ಮಾತನಾಡಿ, ‘ಕಳೆದ ಐದು ವರ್ಷಗಳಲ್ಲಿ ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿದೆ. ಮಿಲಿಟರಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಭಾರತವು ಅಮೆರಿಕ, ಇಸ್ರೇಲ್ ಸೇರಿದಂತೆ ವಿವಿಧ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ‘FWD 200B’ಯ ಯಶಸ್ವಿ ಹಾರಾಟವು ನಮ್ಮ ಕಂಪನಿಯ ಸಾಧನೆ ಮಾತ್ರವಲ್ಲ, ಇಡೀ ರಾಷ್ಟ್ರದ ಗೆಲುವಾಗಿದೆ’ ಎಂದಿದ್ದಾರೆ.

‘ಇದು ದೇಶದ ರಕ್ಷಣಾ ವಲಯದಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ. ಮಾನವರಹಿತ ಬಾಂಬರ್ ವಿಮಾನಗಳಿಗಾಗಿ ಭಾರತವು ವಿದೇಶಗಳ ಮೇಲೆ ಅವಲಂಬಿತವಾಗುವುದನ್ನು ತಗ್ಗಿಸುವ ಉದ್ದೇಶದಿಂದ ಹಾಗೂ ಭಾರತವನ್ನು ಜಾಗತಿಕ ಮಟ್ಟದ ಡ್ರೋನ್ ಉತ್ಪಾದನಾ ಕೇಂದ್ರವನ್ನಾಗಿಸಲು ಕಂಪನಿ ಮುಂದಾಗಿದೆ’ ಎಂದು ತೇಜಸ್ಕಂದ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಯುದ್ಧ ಬಾಂಬರ್‌ನ ಹಾರಾಟವನ್ನು ವಿಡಿಯೊ ಸ್ಕ್ರೀನಿಂಗ್ ಮೂಲಕ ಪ್ರದರ್ಶಿಸಲಾಯಿತು.

ಏರ್‌ಕ್ರಾಫ್ಟ್‌ಗಳ ಏರೋಡೈನಾಮಿಕ್ಸ್ ವಿನ್ಯಾಸ, ಏರ್‌ಫ್ರೇಮ್, ಪ್ರೊಪಲ್ಷನ್ ಸಿಸ್ಟಮ್‌ಗಳು, ಕಂಟ್ರೋಲ್ ಸಿಸ್ಟಮ್‌ಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ದೇಶೀಯವಾಗಿಯೇ ತಯಾರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಮೆರಿಕದ ‘ಪ್ರಿಡೇಟರ್‌’ಗೆ ಬರೋಬ್ಬರಿ ₹250 ಕೋಟಿ ವೆಚ್ಚವಾದರೆ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಾಗೂ ಭಾರತದಲ್ಲೇ ತಯಾರಾದ ಎಫ್‌ಡಬ್ಲ್ಯುಡಿ-200ಬಿ ಏರ್‌ಕ್ರಾಫ್ಟ್‌ಗೆ ಕೇವಲ ₹25 ಕೋಟಿ ವೆಚ್ಚವಾಗಲಿದೆ. ಇದು ಭಾರತವನ್ನು ಆತ್ಮನಿರ್ಭರ ಶಕ್ತಿಯನ್ನಾಗಿ ಹೊರಹೊಮ್ಮುವಂತೆ ಮಾಡುವುದರ ಜೊತೆಗೆ, ದೇಶದ ರಕ್ಷಣಾ ವೆಚ್ಚವನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದಿದ್ದಾರೆ.

ವೈಶಿಷ್ಟ್ಯಗಳು...

ರೆಕ್ಕೆಗಳು: 5 ಮೀಟರ್ (16.4 ಅಡಿ)

ಉದ್ದ: 3.5 ಮೀಟರ್ (12.1 ಅಡಿ)

ಗರಿಷ್ಠ ಟೇಕ್-ಆಫ್ ತೂಕ (MTOW): 102 ಕೆಜಿ

ಪೇಲೋಡ್ ಸಾಮರ್ಥ್ಯ: 30 ಕೆಜಿ

ಕ್ರೂಸ್ ಎತ್ತರ: 12,000 ಅಡಿ

ಸಂಪೂರ್ಣ ಸೀಲಿಂಗ್: 15,000 ಅಡಿ

ಕ್ರೂಸ್ ವೇಗ: 152 ಕಿಮೀ/ಗಂ

ಗರಿಷ್ಠ ವೇಗ: 250 km/h

ರನ್‌ವೇ ಅವಶ್ಯಕತೆ: 300 ಮೀಟರ್

ವ್ಯಾಪ್ತಿ: 800 ಕಿ.ಮೀ ಹಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT