ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ರಸ್ತೆ ಗುಂಡಿಗೆ ಗೂಗಲ್‌ನಲ್ಲೂ ಫೈವ್ ಸ್ಟಾರ್ ರೇಟಿಂಗ್

Last Updated 21 ಸೆಪ್ಟೆಂಬರ್ 2022, 13:53 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಹಲವಾರು ವರ್ಷಗಳಿಂದಲೂ ಬೆಂಗಳೂರಿನ ರಸ್ತೆ ಗುಂಡಿಗಳು ಚರ್ಚೆಯ ವಿಷಯ. ಮಳೆಗಾಲದಲ್ಲಂತೂ ಪರಿಸ್ಥಿತಿ ಮತ್ತಷ್ಟು ಹದೆಗೆಡುತ್ತದೆ. ನಗರದಲ್ಲೀಗ ಗುಂಡಿಗಳಿಲ್ಲದ ರಸ್ತೆಗಳೇ ಇಲ್ಲ ಎಂಬಂತಾಗಿದೆ.

ಬದಲಾದ ಸರ್ಕಾರಗಳು ಚುನಾವಣೆಗೂ ಮೂದಲು ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗುತ್ತವೆ. ಆದರೆ ಕಳಪೆ ಕಾಮಗಾರಿಯಿಂದಾಗಿ ಮತ್ತೆ ಸಮಸ್ಯೆ ಕಾಡುತ್ತಿದೆ.

ಈ ನಡುವೆ ಬೆಂಗಳೂರಿನ ಐತಿಹಾಸಿಕ ಪ್ರದೇಶಗಳ ಪಟ್ಟಿಯಲ್ಲಿ ರಸ್ತೆ ಗುಂಡಿಯೊಂದು (Abizer's Pothole) ಕಾಣಿಸಿಕೊಂಡಿದೆ. ಗೂಗಲ್‌ ಮ್ಯಾಪ್‌ನಲ್ಲಿ ಕಾಣಿಸಿಕೊಂಡ ಈ ಗುಂಡಿ ಬಳಕೆದಾರರಿಂದ ಫೈವ್ ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದೆ. ಹೌದು, ಇದು ವಿಚಿತ್ರ ಅನಿಸಿದರೂ ಸತ್ಯ.

ಬೆಂಗಳೂರಿನ ಬೆಳ್ಳಂದೂರು ಪ್ರದೇಶದಲ್ಲಿನ ರಸ್ತೆ ಗುಂಡಿ ‌ಗೂಗಲ್‌ನಲ್ಲೂ ನಾಗರಿಕರಿಂದ ಅತ್ಯುತ್ತಮ ರಿವ್ಯೂ ಗಿಟ್ಟಿಸಿಕೊಂಡಿದೆ.

ನಿಮೊ ತಾಯ್ ಎಂಬ ಟ್ವಿಟರ್ ಬಳಕೆದಾರರು ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಗುಂಡಿ ಗೂಗಲ್‌ನಲ್ಲೂ ಸ್ಥಾನ ಪಡೆದಿದ್ದು, ಅತ್ಯುತ್ತಮ ರಿವ್ಯೂ ಪಡೆದಿದೆ ಎಂದು ಉಲ್ಲೇಖಿಸಿದ್ದಾರೆ.

ಮಗದೊಂದು ಟ್ವೀಟ್‌ನಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಗೂಗಲ್ ಮ್ಯಾಪ್‌ನಿಂದ ಗುಂಡಿ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಕೆಲವೇ ಹೊತ್ತಿನಲ್ಲಿ ಮತ್ತೊಂದು ಗುಂಡಿ ಹುಟ್ಟಿಕೊಂಡಿದೆ ಎಂದು ತಿಳಿಸಿದ್ದಾರೆ.

ಇಂತಹ ರಸ್ತೆ ಗುಂಡಿ ನಾವು ಹಿಂದೆಂದೂ ನೋಡಿರಲಿಲ್ಲ. ಖಂಡಿತವಾಗಿಯೂ ಭೇಟಿ ಕೊಡಲೇಬೇಕಾದ ಅತ್ಯುತ್ತಮ ಗುಂಡಿ ಎಂದು ಗೂಗಲ್‌ ಬಳಕೆದಾರರಿಂದ ಫೈವ್ ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT