ಬೆಂಗಳೂರು: ಕಂಟೋನ್ಮೆಂಟ್ ಪ್ರದೇಶದಲ್ಲಿರುವ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡ ಕಟ್ಟಲು ಅವಕಾಶ ಕೊಡದೆ, ಮರಗಳು ಮತ್ತು ಜೀವ ಪರಿಸರ ವ್ಯವಸ್ಥೆ ಉಳಿಸಿಕೊಳ್ಳಬೇಕು ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಕಂಟೋನ್ಮೆಂಟ್ ರೈಲ್ವೆ ಕಾಲೊನಿಯಲ್ಲಿ 368 ಮರಗಳನ್ನು ಕಡಿಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಂಘಟನೆ ಸದಸ್ಯರೊಂದಿಗೆ ಭೇಟಿ ನೀಡಿ ಮರಗಳು ಮತ್ತು ಜೀವ ಪರಿಸರ ವ್ಯವಸ್ಥೆ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ನಗರದಲ್ಲಿ ದಿನದಿಂದ ದಿನಕ್ಕೆ ಮರಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ವಾಯುಮಾಲಿನ್ಯ ಹೆಚ್ಚುತ್ತಿದೆ. ಜಗತ್ತಿನಲ್ಲಿ ಒಬ್ಬ ವ್ಯಕ್ತಿಗೆ ಸರಾಸರಿ 422 ಮರಗಳಿವೆ. ಭಾರತದಲ್ಲಿ ಒಬ್ಬ ವ್ಯಕ್ತಿಗೆ ಕೇವಲ 28 ಮರಗಳಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯ ಆಗುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನವಾಗುತ್ತಿದೆ ಎಂದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ‘1973ರಿಂದ 2023 ರವರೆಗೆ ಪ್ರತಿ ಹತ್ತು ವರ್ಷಗಳಲ್ಲಿ ಬೆಂಗಳೂರಿನ ಹಸಿರು ಹೊದಿಕೆ ಎಷ್ಟು ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂಬ ಅಧ್ಯಯನವನ್ನು ಭಾರತೀಯ ವಿಜ್ಞಾನ ಸಂಸ್ಥೆ ಮಾಡಿ, ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅರಣ್ಯ ಇಲಾಖೆ, ರೈಲ್ವೆ ಇಲಾಖೆಯ ಅಧಿಕಾರಿಗಳು ಇದನ್ನು ನೋಡಿಲ್ಲವೇ? 1973ರಲ್ಲಿ ಇದ್ದ ಹಸಿರಿನ ಹೊದಿಕೆ 2023ರಲ್ಲಿ ಶೇಕಡಾ 90 ರಷ್ಟು ಕಡಿಮೆ ಆಗಿದೆ. ಇಲ್ಲಿನ ಮರಗಳ ಜೊತೆಗೆ ಪಕ್ಷಿ, ಕ್ರಿಮಿ ಕೀಟಗಳು, ಜೇನು ಜೇಡ ದುಂಬಿ ಇತ್ಯಾದಿ ಜೀವ ಸಂಕುಲವನ್ನು ಸಂರಕ್ಷಣೆ ಮಾಡಲು ಸಂಕಲ್ಪ ಮಾಡಬೇಕು’ ಎಂದು ಹೇಳಿದರು.

ಟ್ರೀ ಡಾಕ್ಟರ್ ವಿಜಯ್ ನಿಶಾಂತ್ ಅವರು, ಈ ಭಾಗದಲ್ಲಿ 70ಕ್ಕೂ ಹೆಚ್ಚು ಪಾರಂಪರಿಕ ಮರಗಳಿವೆ ಎಂದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಾರ್ವತಿ ಶ್ರೀರಾಮ್, ಸಂಘಟನಾ ಕಾರ್ಯದರ್ಶಿ ಸಿ.ಎಚ್.ಸಿಕಂದರ್, ಕಾರ್ಯಾಧ್ಯಕ್ಷ ಆಂಜನೇಯ ರೆಡ್ಡಿ , ರಾಜ್ಯ ಕಾರ್ಯದರ್ಶಿಗಳಾದ ಕೆ. ಪಾಪೇಗೌಡ, ಮಂಜುನಾಥ್ ಸಣ್ಣಿಂಗಣ್ಣನವರ, ವೇಣುಗೋಪಾಲ, ಅರ್ಚನಾ ರಾವ್, ನಮ್ಮ ಬೆಂಗಳೂರು ಫೌಂಡೇಶನ್ನ ವಿನೋದ್ ಜೇಕಬ್, ಜೋಸೆಫ್ ಹೂವರ್, ಜೇಮ್ಸ್ ಅಲೆಕ್ಸಾಂಡರ್, ಡಾ ಟಿ. ಜೆ.ರೇಣುಕಾ ಪ್ರಸಾದ್, ಪತ್ರಕರ್ತ ಇಂದೂಧರ ಹೊನ್ನಾಪುರ, ಪರಿಸರ ಮಂಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.