ಜನ್ಮ ದಿನಾಂಕದ ಮಾಹಿತಿ ಪಡೆದು ಮೋಸ
ಮತ್ತೊಂದು ಪ್ರಕರಣದಲ್ಲಿ 41 ವರ್ಷದ ವಿಕಾಸ್‌ಕುಮಾರ್ ಅವರಿಗೆ ಕರೆ ಮಾಡಿದ್ದ ವಂಚಕರು ಜನ್ಮದಿನಾಂಕದ ಮಾಹಿತಿ ಪಡೆದು ಕ್ರೆಡಿಟ್ ಕಾರ್ಡ್‌ನಿಂದ ₹5.94 ಲಕ್ಷ ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾರೆ. ‘ದೂರುದಾರರು ಹೊಂದಿದ್ದ ಬ್ಯಾಂಕ್ ಖಾತೆಯ ವಾರ್ಷಿಕ ಶುಲ್ಕವಾದ ₹2900 ಅನ್ನು ಮನ್ನಾ ಮಾಡಲಾಗಿದೆ ಎಂದು ವಾಟ್ಸ್‌ಆ್ಯಪ್ ಸಂದೇಶ ಬಂದಿತ್ತು. ಎಪಿಕೆ ಫೈಲ್ ಅನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ ಆರೋಪಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಮನ್ನಾದ ವಿವರಗಳನ್ನು ಪರಿಶೀಲನೆ ಮಾಡುವಂತೆ ಸೂಚಿಸಿದ್ದ. ಅಲ್ಲದೇ ಜನ್ಮದಿನಾಂಕದ ಮಾಹಿತಿಯನ್ನೂ ಪಡೆದುಕೊಂಡಿದ್ದ. ಕೆಲವೇ ಕ್ಷಣಗಳಲ್ಲಿ ದೂರುದಾರರ ಮೂರು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳಿಂದ ₹5.94 ಲಕ್ಷ ಮಾಯ ಆಗಿತ್ತು’ ಎಂದು ಸೈಬರ್ ಪೊಲೀಸರು ಹೇಳಿದರು.