ಮೃತಪಟ್ಟಂತೆ ನಟಿಸಿದ್ದ ಕನಕಪುಷ್ಪಾ
ಕನಕಪುಷ್ಪಾ ಅವರ ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆಗೆ ಚಾಕು ಇರಿದು ಆರೋಪಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ಆರೋಪಿ ಮಡಿವಾಳಪ್ಪ ‘ವೃದ್ಧೆ ಸತ್ತಿದ್ದಾಳೆಯೇ ಪರಿಶೀಲಿಸಿ; ಬದುಕಿದರೆ ಆಕೆಯೇ ಸಾಕ್ಷಿಯಾಗುತ್ತಾಳೆ’ ಎಂದು ಇತರೆ ಆರೋಪಿಗಳಿಗೆ ಹೇಳಿದ್ದ. ಅದನ್ನು ಕನಕಪುಷ್ಪಾ ಅವರು ಕೇಳಿಸಿಕೊಂಡು ಮೃತಪಟ್ಟಂತೆ ನಟಿಸಿದ್ದರು. ಬಳಿಕ, ಆರೋಪಿಗಳು ನಗದು ಮತ್ತು ದಾಖಲೆ ತೆಗೆದುಕೊಂಡು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.