ಬೆಂಗಳೂರು: ಕಂಪನಿಯ ಮಹಿಳಾ ಸಹೋದ್ಯೋಗಿಗಳ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಮಾಜಿ ಉದ್ಯೋಗಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಕ್ಕೂರು ನಿವಾಸಿ ಆಶಿಶ್ ಮೊನ್ನಪ್ಪ (31) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಡಿಕೇರಿಯ ಆಶಿಶ್ ಮೊನ್ನಪ್ಪ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಜಕ್ಕೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಯುವತಿಯರ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಳೆದ ಜನವರಿಯಲ್ಲಿ ಕೆಲಸ ತೊರೆದಿದ್ದ ಆರೋಪಿ, ಬೇರೆ ಕಂಪನಿಗಳಿಗೆ ಸ್ವವಿವರ ಕಳುಹಿಸಲು ಹಳೆ ಕಂಪನಿಯ ಮಹಿಳಾ ಸಹೋದ್ಯೋಗಿಯಿಂದ ಲ್ಯಾಪ್ಟಾಪ್ ಪಡೆದುಕೊಂಡಿದ್ದ. ಕೆಲ ದಿನಗಳ ನಂತರ ಲ್ಯಾಪ್ಟಾಪ್ ಹಿಂತಿರುಗಿಸಿದ್ದ. ಆದರೆ, ಅಸಭ್ಯವಾಗಿ ಮಹಿಳೆಯರ ಫೋಟೊಗಳನ್ನು ಎಡಿಟ್ ಮಾಡಿಟ್ಟುಕೊಂಡಿದ್ದ ಫೋಲ್ಡರ್ ಅಳಿಸಿ ಹಾಕುವುದನ್ನು ಮರೆತಿದ್ದ. ಸ್ನೇಹಿತೆ ಲ್ಯಾಪ್ಟಾಪ್ ನೋಡಿದಾಗ ಈ ವಿಚಾರ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಈ ಬಗ್ಗೆ ಕರೆ ಮಾಡಿ ಆರೋಪಿಯನ್ನು ಕರೆಸಿಕೊಂಡು ಪ್ರಶ್ನಿಸಿದಾಗ, ಆತಂಕಗೊಂಡು ಸ್ಥಳದಲ್ಲೇ ಮೊಬೈಲ್ ಬಿಟ್ಟು ಪರಾರಿಯಾಗಿದ್ದ. ಮಾಜಿ ಸಹೋದ್ಯೋಗಿಗಳೂ ಸೇರಿದಂತೆ ಹಲವು ಮಹಿಳೆಯರ ಭಾವಚಿತ್ರಗಳನ್ನು ತಿರುಚಿ ನಕಲಿ ಬೆತ್ತಲೆ ಫೋಟೊಗಳ ಜೊತೆ ಸೇರಿಸಿ ಎಡಿಟ್ ಮಾಡಿ, ಟೆಲಿಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆಯುತ್ತಿದ್ದ. ಸಂತ್ರಸ್ತೆಯರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.