ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಶನಿವಾರ ಸಂಜೆಯಿಂದ ರಾತ್ರಿಯವರೆಗೆ ಭಾರಿ ಮಳೆಯಾಯಿತು. ಪ್ರಮುಖ ರಸ್ತೆಗಳಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ, ವಾಹನಗಳ ಸವಾರು ಪರದಾಡಿದರು.

ಶನಿವಾರ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ, ಸಂಜೆ ಮಳೆ ಸುರಿಯಿತು. ರಸ್ತೆಗಳು ಜಲಾವೃತವಾಗಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು. ಜಂಕ್ಷನ್ಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿ, ಸಿಗ್ನಲ್ಗಳ ಬಳಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.

ಸಿಕ್ಯೂಎಎಲ್ ಕ್ರಾಸ್, ಮೇಖ್ರಿ ವೃತ್ತ, ಗಾರೆಬಾವಿಪಾಳ್ಯ ಜಂಕ್ಷನ್, ನಾಗವಾರ ಜಂಕ್ಷನ್, ವೀರಣ್ಣಪಾಳ್ಯ ಸರ್ವೀಸ್ ರಸ್ತೆ, ಕ್ವೀನ್ಸ್ ರಸ್ತೆ, ಅನಿಲ್ ಕುಂಬ್ಳೆ ಜಂಕ್ಷನ್, ಹುಣಸೆಮರ ಜಂಕ್ಷನ್, ಬಿನ್ನಿಮಿಲ್ ರೈಲ್ವೆ ಕಳೆಸೇತುವೆ, ಖೋಡೆ ಜಂಕ್ಷನ್, ಮೆಜೆಸ್ಟಿಕ್, ಹಳೆಯ ಉದಯ ಟಿವಿ ಜಂಕ್ಷನ್, ಜಯಮಹಲ್ ರಸ್ತೆ, ಚೊಕ್ಕಸಂದ್ರ, ದಾಸರಹಳ್ಳಿ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಬಿಳೇಕಹಳ್ಳಿ, ಸಾರಕ್ಕಿ ಸಿಗ್ನಲ್, ಜೆ.ಪಿ.ನಗರ, ಡೇರಿ ವೃತ್ತ, ಆಸ್ರಾ ಆಸ್ಪತ್ರೆ ಬನ್ನೇರುಘಟ್ಟ ರಸ್ತೆ, ಸಿಲ್ಕ್ ಬೋರ್ಡ್, ಹೆಬ್ಬಾಳ ಮುಖ್ಯ ರಸ್ತೆ ಕಡೆಗೆ ಸಾಗುವ ರಸ್ತೆಗಳು ನೀರಿನಿಂದ ಆವೃತವಾದವು.

ರೂಪೇನ ಅಗ್ರಹಾರ ಜಂಕ್ಷನ್, ಬೊಮ್ಮನಹಳ್ಳಿ, ಜರಗನಹಳ್ಳಿ, ಮೈಸೂರು ರಸ್ತೆ ಟೋಲ್ ಗೇಟ್, ಹಳೆ ಗುಡ್ಡದಹಳ್ಳಿ, ಬೊಮ್ಮನಹಳ್ಳಿ ಜಂಕ್ಷನ್, ಹೆಬ್ಬಾಳ ಪೊಲೀಸ್ ಠಾಣೆ ಬಳಿ, ಕಸ್ತೂರಿ ನಗರ ಮುಖ್ಯ ರಸ್ತೆ, ರಾಮಮೂರ್ತಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.