‘ಬೈಕ್ ಟ್ಯಾಕ್ಸಿಗಳವರು ನಿಯಮ ಮೀರಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದು, ಇದರಿಂದ ಆಟೊರಿಕ್ಷಾ ಚಾಲಕರಿಗೆ ದುಡಿಮೆ ಇಲ್ಲದಂತಾಗಿದೆ. ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಕೊಲೆ ಬೆದರಿಕೆ ಹಾಕಲಾಗಿದೆ. ‘ಡಿ ಬಾಸ್ ಮಾಡಿದಂತೆ ಮರ್ಡರ್ ಮಾಡಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ’ ಎಂದು ಪ್ರತಿಭಟಕಾರರು ಆರೋಪಿಸಿದರು.