ಬೆಂಗಳೂರಿನಲ್ಲಿ ಮೂಲಸೌಕರ್ಯಗಳು ಬಹಳ ಬೇಗ ದೊರಕುವುದಿಲ್ಲ. ವಿಮಾನ ನಿಲ್ದಾಣಕ್ಕೆ ಬಹಳ ಬೇಗನೇ ಮೆಟ್ರೊ ಸಂಪರ್ಕ ಆಗಬೇಕಿತ್ತು. 2027ರ ಒಳಗೆ ಆಗಲಿದೆ ಎಂದು ಹೊಸ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದ್ದಾರೆ. ಅವರ ಭರವಸೆ ಮತ್ತೆ ಮುಂದಕ್ಕೆ ಹೋಗದೇ ನೀಲಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗಬೇಕು.
ಕೆ.ಎನ್. ಕೃಷ್ಣಪ್ರಸಾದ್, ನಿವೃತ್ತ ಸರ್ಕಾರಿ ಅಧಿಕಾರಿ
ಮೆಟ್ರೊ ಬೇಗ ಆದಷ್ಟೂ ಒಳ್ಳೆಯದು. ನಾಲ್ಕೈದು ವರ್ಷಗಳಿಂದ ಕೆಲಸ ಆಗುತ್ತಿದೆ. ಆದರೆ ಪೂರ್ಣಗೊಂಡಿಲ್ಲ. ಸಂಚಾರ ದಟ್ಟಣೆ ಇರುವುದರಿಂದ ಓಡಾಡಲು ಸಮಸ್ಯೆಯಾಗಿದೆ. ಇನ್ನೊಂದು ಕಡೆಯಿಂದ ಮೆಟ್ರೊ ಕಾಮಗಾರಿ ನಡೆಸುವಾಗ ಉಂಟಾಗುವ ಸದ್ದು ಸ್ಥಳೀಯ ನಿವಾಸಿಗಳ ನಿದ್ದೆಯನ್ನು ಕೆಡಿಸುತ್ತಿದೆ. ದೂಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಮೆಟ್ರೊ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಂಚಾರ ಆರಂಭಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ.
ಅನಿಲ್, ಹೋಟೆಲ್ ಉದ್ಯಮಿ ಬಾಬುಸಾ ಪಾಳ್ಯ
ಸಂಪರ್ಕ ವ್ಯವಸ್ಥೆ ಸರಿಯಾಗಿ ಇಲ್ಲದ ಪ್ರದೇಶದಲ್ಲಿ ನೀಲಿ ಮಾರ್ಗ ಬರುತ್ತಿದೆ. ಈಗ ವಾಹನ ದಟ್ಟಣೆಯಲ್ಲಿ ಕಾಲ ಕಳೆದು ಹೋಗುತ್ತಿದೆ. ಇಲ್ಲಿ ಮೆಟ್ರೊ ಸಂಚಾರ ಆಂಭಗೊಂಡರೆ ನಮ್ಮ ಸಮಯ ಉಳಿಯಲಿದೆ. ವಾಹನಗಳಿಂದ ಉಂಟಾಗುವ ಮಾಲಿನ್ಯ ಕಡಿಮೆಯಾಗಲಿದೆ.
ಅನುಮೋಲ್, ಖಾಸಗಿ ಕಂಪನಿ ಉದ್ಯೋಗಿ ನಾಗವಾರ ಕ್ರಾಸ್
ದೇವನಹಳ್ಳಿ ವಿಮಾನ ನಿಲ್ದಾಣ ನಗರದಲ್ಲಿ ಕೆಂಪೇಗೌಡ ಪ್ರತಿಮೆಯ ಬಳಿ ನಿರ್ಮಾಣಗೊಳ್ಳುತ್ತಿರುವ ನೀಲಿ ಮಾರ್ಗದ ಮೆಟ್ರೊ ನಿಲ್ದಾಣ