ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬಾಕ್ಸ್‌ ಪುಶಿಂಗ್‌ ತಂತ್ರಜ್ಞಾನದಲ್ಲಿ ಸುರಂಗ ನಿರ್ಮಾಣ

Published 30 ಮೇ 2024, 15:23 IST
Last Updated 30 ಮೇ 2024, 15:23 IST
ಅಕ್ಷರ ಗಾತ್ರ

ಬೆಂಗಳೂರು: ಹೊರ ವರ್ತುಲ ರಸ್ತೆಯಲ್ಲಿರುವ (ಒಆರ್‌ಆರ್‌) ಮೇಲ್ಸೇತುವೆಗೆ ತೊಂದರೆಯಾಗದಂತೆ ಸುರಂಗ ನಿರ್ಮಿಸಲು ಬಿಎಂಆರ್‌ಸಿಎಲ್‌ ಬಾಕ್ಸ್‌ ಪುಶಿಂಗ್‌ ತಂತ್ರಜ್ಞಾನವನ್ನು ಬಳಸಿದೆ.

ಅತಿ ಉದ್ದದ ಸುರಂಗ ಮಾರ್ಗಗಳನ್ನು ಹೊಂದಿರುವ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಒಆರ್‌ಆರ್‌ನಲ್ಲಿ ಮಾತ್ರ ಈ ತಂತ್ರಜ್ಞಾನ ಬಳಕೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ರಸ್ತೆಯಲ್ಲಿ ಮೆಲ್ಸೇತುವೆ ಇರುವುದರಿಂದ ವಿದ್ಯುತ್‌, ಕೇಬಲ್‌ ಸಹಿತ ಅತಿ ಹೆಚ್ಚು ಯುಟಿಲಿಟಿಗಳು ಇಲ್ಲಿರುವುದರಿಂದ ವೃತ್ತಾಕಾರದ ಸುರಂಗ ನಿರ್ಮಾಣ ಮಾಡುತ್ತಿಲ್ಲ. ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಈ ಮಾರ್ಗದಲ್ಲಿ ಒಟ್ಟು 13.76 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗುತ್ತಿದ್ದು, ಇಲ್ಲಿ 77 ಮೀಟರ್‌ ಮಾತ್ರ ಆಯತಾಕಾರದಲ್ಲಿ ಸುರಂಗ ಮಾಡಲಾಗುತ್ತಿದೆ. ಬೇರೆಲ್ಲ ಕಡೆಗಳಲ್ಲಿ ವೃತ್ತಾಕಾರದ ಸುರಂಗಗಳು ಇದ್ದು, ಒಂದು ಸುರಂಗದಲ್ಲಿ ಒಂದು ಪಥ ಹಳಿ ಇರುವುದರಿಂದ ಪ್ರತಿ ಮಾರ್ಗದಲ್ಲಿ ಎರಡು ಸುರಂಗಗಳಿರುತ್ತವೆ. ಆಯತಾಕಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸುರಂಗದಲ್ಲಿ ಮಾತ್ರ ಎರಡೂ ಪಥಗಳು ಇರುತ್ತವೆ ಎಂದು ವಿವರಿಸಿದರು.

ನಾಗವಾರ ಭೂಗತ ಮೆಟ್ರೊ ನಿಲ್ದಾಣದ ದಕ್ಷಿಣ ಭಾಗದಲ್ಲಿ ಸರ್ವಿಸ್‌ ರಸ್ತೆ ಮತ್ತು ಒಆರ್‌ಆರ್‌ ಮೇಲ್ಸೇತುವೆ ಕೆಳಗೆ ಈ ಕಾಮಗಾರಿ ನಡೆಯುತ್ತಿದ್ದು, ಎಂಟು ಬಾಕ್ಸ್‌ಗಳನ್ನು ಬಳಸಿ ಸುರಂಗ ಮಾರ್ಗ ನಿರ್ಮಿಸುವ ಕಾರ್ಯ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT