ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BMTC: ನೈಸ್‌ ರಸ್ತೆ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಸಿಹಿ ಸುದ್ದಿ

Published 2 ಆಗಸ್ಟ್ 2023, 6:48 IST
Last Updated 2 ಆಗಸ್ಟ್ 2023, 6:48 IST
ಅಕ್ಷರ ಗಾತ್ರ

ಬೆಂಗಳೂರು: ನೈಸ್ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಹೆಚ್ಚುವರಿ ಟ್ರಿಪ್‌ಗಳನ್ನು ಹಾಕಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಸುಮ್ಮನಹಳ್ಳಿಯಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೊ ಗೇಟ್‌ವರೆಗಿನ ‘NICE-5A‘ ಹಾಗೂ ನೆಲಮಂಗಲದಿಂದ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ವರೆಗಿನ ‘NICE-8‘ ರೂಟ್‌ಗಳಲ್ಲಿ ಹೆಚ್ಚುವರಿ 2 ಟ್ರಿಪ್‌ಗಳನ್ನು ಹಾಕಲಾಗಿದೆ ಎಂದು ವಿಎಂಟಿಸಿ ಮೈಕ್ರೋಬ್ಲಾಗಿಂಗ್‌ ತಾಣ ‘ಎಕ್ಸ್‌’ನಲ್ಲಿ ಬರೆದುಕೊಂಡಿದೆ.

ಈ ಹೊಸ ಟ್ರಿಪ್‌ನಲ್ಲಿ ನಾನ್‌–ಎಸಿ ಬಸ್‌ಗಳು ಕಾರ್ಯಾಚರಿಸಲಿವೆ.

ಬೆಳಿಗ್ಗೆ 7.30ಕ್ಕೆ ಸುಮ್ಮನಹಳ್ಳಿಯಿಂದ ‘NICE-5A‘ ಬಸ್ ಹೊರಡಲಿದ್ದು, ಪಾಪರೆಡ್ಡಿ ಪಾಳ್ಯ, ಕೆಂಗೇರಿ ಕೆಎಚ್‌ಬಿ ಕ್ವಾಟರ್ಸ್‌, ಮೈಸೂರು ರಸ್ತೆ ನೈಸ್‌ ಟೋಲ್, ಕನಕಪುರ ರಸ್ತೆ ನೈಸ್ ಟೋಲ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ನೈಸ್‌ಟೋಲ್‌ ಮೂಲಕ ಸಂಚರಿಸಲಿದೆ.

ನೆಲಮಂಗಲದಿಂದ ಎಲೆಕ್ಟ್ರಾನಿಕ್‌ ಸಿಟಿ ವಿಪ್ರೋಗೇಟ್‌ಗೆ ಬೆಳಿಗ್ಗೆ 8.30ಕ್ಕೆ ‘NICE-8’ ಬಸ್‌ ಹೊರಡಲಿದೆ. ಮದನಾಯಕನಹಳ್ಳಿ, ಮಾದವಾರ, ಮಾಗಡಿ ರಸ್ತೆ ನೈಸ್ ಟೋಲ್‌ , ಮೈಸೂರು ರಸ್ತೆ ನೈಸ್‌ ಟೋಲ್, ಕನಕಪುರ ರಸ್ತೆ ನೈಸ್ ಟೋಲ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ನೈಸ್‌ ಟೋಲ್‌ ಮೂಲಕ ಈ ಬಸ್‌ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT