ಆರೋಪಿಗಳಿಂದ ವಶಕ್ಕೆ ಪಡೆದ ವಸ್ತುಗಳನ್ನು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಪರಿಶೀಲಿಸಿದರು
ವಂಚನೆಯಲ್ಲಿ ತಾಯಿ ಮಗನ ಪಾತ್ರ
ವಂಚನೆ ಪ್ರಕರಣದ ತನಿಖೆ ಆರಂಭಿಸಿದಾಗ ಹಣ ವರ್ಗಾವಣೆಯಾಗಿದ್ದ ಖಾತೆಗಳ ಸುಳಿವು ಸಿಕ್ಕಿತ್ತು. ಮೊಹಮ್ಮದ್ ಹುಜೈಫಾ ಮತ್ತು ಅವರ ತಾಯಿ ಸಭಾ ಅವರನ್ನು ಮೊದಲಿಗೆ ಬಂಧಿಸಲಾಯಿತು. ಪ್ರಮುಖ ಆರೋಪಿಗಳ ಸೂಚನೆಯಂತೆ ತಾಯಿ ಹಾಗೂ ಮಗ ಬ್ಯಾಂಕ್‌ಗೆ ತೆರಳಿ ಖಾತೆ ತೆರೆಯುವ ಕೆಲಸ ಮಾಡುತ್ತಿದ್ದರು. ಸಾರ್ವಜನಿಕರಿಂದ ದಾಖಲೆಗಳನ್ನೂ ಪಡೆದುಕೊಳ್ಳುತ್ತಿದ್ದರು. ದಾಖಲೆ ನೀಡಿದವರಿಗೆ ಕಮಿಷನ್ ರೂಪದಲ್ಲಿ ಹಣ ನೀಡುತ್ತಿದ್ದರು. ಮೊಹಮ್ಮದ್ ಹುಜೈಫಾ ಮತ್ತು ಸಭಾ ನೀಡಿದ ಮಾಹಿತಿ ಮೇಲೆ ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಉಳಿದ 10 ಮಂದಿಯನ್ನು ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.