ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Rains | ವರ್ಷಧಾರೆ; ಮತ್ತಷ್ಟು ಇಳಿದ ಉಷ್ಣಾಂಶ

ಮೂರು ದಿನಗಳವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ
Published 7 ಮೇ 2024, 0:30 IST
Last Updated 7 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ದಿನಗಳ ನಂತರ ಸೋಮವಾರ ಸಂಜೆ ನಗರದ ಎಲ್ಲೆಡೆ ಉತ್ತಮವಾಗಿ ಮಳೆ ಸುರಿಯಿತು. ಶುಕ್ರವಾರ ಮಧ್ಯಾಹ್ನ ಉತ್ತಮ ಮಳೆಯಾಗಿ ಉಷ್ಣಾಂಶ ಕಡಿಮೆಯಾಗಿತ್ತು. ಸೋಮವಾರವೂ ಮಳೆ ಸುರಿದಿದ್ದರಿಂದ ಬೇಗೆ ಕಡಿಮೆಯಾಗಿ, ತಂಪನೆ ವಾತಾವರಣ ನಿರ್ಮಾಣವಾಯಿತು.

ಸೋಮವಾರ ಸಂಜೆಯಿಂದ ಮೋಡ ಕವಿದ ವಾತಾವರಣವಿತ್ತು. ಸುಮಾರು 7 ಗಂಟೆ ಬಿರುಗಾಳಿ, ಮಿಂಚು, ಸಿಡಿಲಿನಿಂದ ನಗರದ ಹಲವೆಡೆ ಮಳೆ ಸುರಿಯಿತು. ಬಿರುಗಾಳಿಗೆ ಅಲ್ಲಲ್ಲಿ ಮರಗಳ ಕೊಂಬೆಗಳು ರಸ್ತೆಗೆ ಬಿದ್ದವು. ಇದರಿಂದ ಸಂಚಾರಕ್ಕೆ ಅಡ್ಡಿಯಾಯಿತು.

ಗುಟ್ಟಹಳ್ಳಿ, ಬನಶಂಕರಿ, ವಿದ್ಯಾಪೀಠಗಳಲ್ಲಿ ಸುಮಾರು ನಾಲ್ಕು ಸೆಂ.ಮೀಟರ್‌ನಷ್ಟು ಮಳೆಯಾಯಿತು. ಬಿಟಿಎಂ ಲೇಔಟ್‌, ಜಯನಗರ, ಕೋರಮಂಗಲ, ಎಚ್‌ಎಎಲ್‌ ವಿಮಾನ ನಿಲ್ದಾಣ, ಮಾರತ್ತಹಳ್ಳಿ, ಅರಕೆರೆ, ಸಂಪಂಗಿರಾಮನಗರ, ಮೆಜೆಸ್ಟಿಕ್‌, ಚಾಮರಾಜಪೇಟೆ, ಹೊಯ್ಸಳನಗರ, ಗರುಡಾಚಾರ್‌ಪಾಳ್ಯ, ದೊಡ್ಡನೆಕ್ಕುಂದಿ ಸುತ್ತಮುತ್ತ 3 ಮಿ.ಮೀನಿಂದ 9 ಮಿ.ಮೀವರೆಗೆ ಮಳೆಯಾಗಿದೆ.

ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ನಗರದ 33 ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು. 15 ಪ್ರದೇಶಗಳಲ್ಲಿ ಮರ ಹಾಗೂ ಕೊಂಬೆಗಳು ಧರೆಗುರುಳಿದವು. ಇದರಿಂದ ನಗರದಲ್ಲಿ ಹಲವೆಡೆ ಸಂಚಾರಕ್ಕೆ ಅಡಚಣೆಯಾಯಿತು. ಹಲವೆಡೆ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗ ಸೂಚಿಸಲಾಗಿತ್ತು. ರಾತ್ರಿ 10ರವರೆಗೆ ವಾಹನ ಸಂಚಾರದ ನಿಧಾನಗತಿಯಲ್ಲಿತ್ತು. ನಗರದ ಕೆಲವೆಡೆ ತಡರಾತ್ರಿಯವರೆಗೂ ಮಳೆ ಮುಂದುವರಿದಿತ್ತು. 

9ರವರೆಗೆ ಮಳೆ: ಮುಂದಿನ ಮೂರು ದಿನಗಳವರೆಗೆ ನಗರದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಸಂಜೆ ವೇಳೆಯೇ ಮಳೆ ಬರುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

ವಿಧಾನಸೌಧ ಮೆಟ್ರೊ ನಿಲ್ದಾಣದ ಬಳಿ ಸೋಮವಾರ ಸುರಿದ ಮಳೆಯಲ್ಲೇ ಕೊಡೆ ಹಿಡಿದು ಸಾಗಿದ ಜನ –ಪ್ರಜಾವಾಣಿ ಚಿತ್ರ/ರಂಜು ಪಿ
ವಿಧಾನಸೌಧ ಮೆಟ್ರೊ ನಿಲ್ದಾಣದ ಬಳಿ ಸೋಮವಾರ ಸುರಿದ ಮಳೆಯಲ್ಲೇ ಕೊಡೆ ಹಿಡಿದು ಸಾಗಿದ ಜನ –ಪ್ರಜಾವಾಣಿ ಚಿತ್ರ/ರಂಜು ಪಿ
ಸೋಮವಾರ ಸುರಿದ ಮಳೆಯಲ್ಲೇ ಬೈಕ್‌ ಸವಾರಿ –ಪ್ರಜಾವಾಣಿ ಚಿತ್ರ/ರಂಜು ಪಿ
ಸೋಮವಾರ ಸುರಿದ ಮಳೆಯಲ್ಲೇ ಬೈಕ್‌ ಸವಾರಿ –ಪ್ರಜಾವಾಣಿ ಚಿತ್ರ/ರಂಜು ಪಿ
ಸೋಮವಾರ ಸುರಿದ ಮಳೆಯಲ್ಲೇ ಕೊಡೆ ಹಿಡಿದು ಸಾಗಿದ ಜನ –ಪ್ರಜಾವಾಣಿ ಚಿತ್ರ/ರಂಜು ಪಿ
ಸೋಮವಾರ ಸುರಿದ ಮಳೆಯಲ್ಲೇ ಕೊಡೆ ಹಿಡಿದು ಸಾಗಿದ ಜನ –ಪ್ರಜಾವಾಣಿ ಚಿತ್ರ/ರಂಜು ಪಿ
ಕೆ.ಆರ್. ರಸ್ತೆಯಲ್ಲಿ ಸೋಮವಾರ ಕುಟುಂಬವೊಂದು ಮಳೆಯಲ್ಲೇ ಸಾಗಿದ್ದು ಹೀಗೆ. ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಕೆ.ಆರ್. ರಸ್ತೆಯಲ್ಲಿ ಸೋಮವಾರ ಕುಟುಂಬವೊಂದು ಮಳೆಯಲ್ಲೇ ಸಾಗಿದ್ದು ಹೀಗೆ. ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಸೋಮವಾರ ಸುರಿದ ಮಳೆಯಲ್ಲೇ ಸಾಗಿದ ವಾಹನ ಸವಾರರು .ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಸೋಮವಾರ ಸುರಿದ ಮಳೆಯಲ್ಲೇ ಸಾಗಿದ ವಾಹನ ಸವಾರರು .ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಶಂಕರಮಠ ಬಳಿಯ ಕಾರ್ಡ್‌ ರಸ್ತೆಯಲ್ಲಿ ಮರದ ಕೊಂಬೆಯೊಂದು ಬಿದ್ದು ಕಾರು ಜಖಂಗೊಂಡಿತು 
ಶಂಕರಮಠ ಬಳಿಯ ಕಾರ್ಡ್‌ ರಸ್ತೆಯಲ್ಲಿ ಮರದ ಕೊಂಬೆಯೊಂದು ಬಿದ್ದು ಕಾರು ಜಖಂಗೊಂಡಿತು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT