ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಬೇಲಿ ಮುರಿದು ಕನಸುಗಳ ಬೆನ್ನತ್ತಿ

ತಂತ್ರಜ್ಞಾನ ಕ್ಷೇತ್ರದ ಮಹಿಳಾ ಸಾಧಕಿಯರ ಕಿವಿಮಾತು
Last Updated 21 ನವೆಂಬರ್ 2019, 2:48 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿ ಮಹಿಳೆಗೂ ತನ್ನದೇ ಆದ ಕನುಸುಗಳಿರುತ್ತವೆ. ಸಾಮಾಜಿಕ ಹಾಗೂ ಕೌಟುಂಬಿಕ ಬೇಲಿಗಳ ಒಳಗೆ ಸಿಲುಕಿರುವ ಮಹಿಳೆ ತನ್ನ ಕನಸುಗಳನ್ನು ಹೊಸಕಿಹಾಕುತ್ತಿದ್ದಾಳೆ. ಇಂತಹ ಮಾನಸಿಕ ಬೇಲಿಗಳನ್ನು ಮುರಿದು ಕನಸುಗಳ ಬೆನ್ನಹತ್ತಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ...’

ಇನ್‌ಸ್ಟಿಟ್ಯೂಟ್‌ ಇಂಡಿಯಾ ಪ್ರಾಡಕ್ಟ್‌ ಡೆವಲಪ್‌ಮೆಂಟ್‌ ಸೆಂಟರ್‌ನ ಎಂಜಿನಿಯರಿಂಗ್‌ ಡೈರೆಕ್ಷರ್‌ ಸಿಂಥಿಯಾ ಶ್ರೀನಿವಾಸ್ ಅವರು ತಂತ್ರಜ್ಞಾನ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿರುವ ಮಹಿಳೆಯರಿಗೆ ಹೇಳಿದ ಕಿವಿಮಾತಿದು.

ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಾಲ್ವರು ಮಹಿಳೆಯರು ‘ನಾಯಕಿಯರ ಮಾತು ಕೇಳಿ’ ಗೋಷ್ಠಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಉತ್ಪನ್ನಗಳನ್ನು ರೂಪಿಸುವಾಗ ಹೇಗೆ ಮಹಿಳೆಯರನ್ನು ಕಡೆಗಣನೆ ಮಾಡ
ಲಾಗುತ್ತಿದೆ ಎಂಬುದನ್ನು ವಿವರಿಸಿದ ಸಿಂಥಿಯಾ, ‘ತಯಾರಾಗುವ ಉತ್ಪನ್ನಗಳ ಬಳಕೆದಾರರಲ್ಲಿ ಮಹಿಳೆಯರ ಪಾಲು ಶೇ 70ರಷ್ಟಿದೆ. ಆದರೂ, ಈ ಉತ್ಪನ್ನಗಳನ್ನು ಪುರುಷರ ಮನೋಪ್ರವೃತ್ತಿಗಳಿಗೆ ಅನುಗುಣವಾಗಿಯೇ ರೂಪಿಸಲಾಗುತ್ತದೆ. ಇದನ್ನು ಬದಲಿಸಬೇಕಿದೆ’ ಎಂದ ಅವರು, ಕಾರುಗಳ ವಿನ್ಯಾಸದ ಉದಾಹರಣೆ ನೀಡಿದರು.

ಸಮನ್ವಯಕಾರ್ತಿ ಗೀತಾ ಕಣ್ಣನ್‌, ‘ಮಹಿಳೆಯರಿಗೆ ಸರಿಯಾಗಿ ವಾಹನ ಚಲಾಯಿಸಲು ಬರುವುದಿಲ್ಲ ಎಂದು ಭಾವಿಸಿದ್ದೆ. ನನಗೆ ಇಂದು ಸತ್ಯದರ್ಶನವಾಯಿತು’ ಎಂದುಚಟಾಕಿ ಸಿಡಿಸಿದರು.

ಸೋಷಿಯೇಟ್‌ ಜನರೇಲ್‌ ಗ್ಲೋಬಲ್‌ ಸೊಲ್ಯೂಷನ್‌ ಸೆಂಟರ್‌ನ ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್ ಲೀಡರ್‌ ಎಸ್‌.ಮಾಲತಿ, ‘ವೃತ್ತಿ ಬದುಕಿನ ಆರಂಭದಲ್ಲಿ ಅಳುಕು ಸಹಜ. ಆದರೆ, ಛಲ ಇದ್ದರೆ ಏಳಿಗೆ ಸಾಧಿಸುವುದು ಕಷ್ಟವೇನಲ್ಲ’ ಎಂದರು.

‘ವೃತ್ತಿಬದುಕು– ಕುಟುಂಬದ ದೃಷ್ಟಿಕೋನ ಬದಲಾಗಲಿ’:‘ಕಾರ್ಪೊರೇಟ್‌ ಕಂಪನಿಗಳಲ್ಲಿ ಪ್ರಮುಖ ಹುದ್ದೆ ವಹಿಸಿರುವವರಲ್ಲಿ ಮಹಿಳೆಯರ ಪಾಲು ಶೇ 3ರಷ್ಟು ಮಾತ್ರ. ಮಹಿಳೆ ಉನ್ನತ ಸ್ಥಾನಗಳಿಗೆ ಏರುವ ದಾರಿ ಸುಲಭವಲ್ಲ. ಮಹಿಳೆಯ ವೃತ್ತಿಜೀವನದ ಬಗ್ಗೆ ಕುಟುಂಬದವರು ಹಾಗೂ ಸಮಾಜ ಹೊಂದಿರುವ ದೃಷ್ಟಿಕೋನ ಬದಲಿಸದ ಹೊರತು ಇಂತಹ ಪ್ರಕರಣಗಳಿಗೆ ಕೊನೆ ಇಲ್ಲ’ ಎಂದು ಟೆಸ್ಕೊ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕಿ ವಿದ್ಯಾ ಲಕ್ಷ್ಮಣ್ ಹೇಳಿದರು.

‘ಸಾಮಾಜಿಕ ಒಡನಾಟಕ್ಕೆ ಮಹತ್ವ ನೀಡಿ’

‘ವೃತ್ತಿ ಬದುಕಿನಲ್ಲಿ ಉನ್ನತಿ ಸಾಧಿಸಲು ಪ್ರತಿಭೆಯೊಂದಿದ್ದರೆ ಸಾಲದು, ಸಾಮಾಜಿಕ ಒಡನಾಟಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ವೃತ್ತಿ ಸಲುವಾಗಿ ಪ್ರವಾಸ ಕೈಗೊಳ್ಳಬೇಕಾಗಿ ಬಂದಾಗ, ಕುಟುಂಬದವರಿಂದ ದೂರ ಇರಬೇಕಾಗುತ್ತದೆ ಎಂದು ಹಿಂದೇಟು ಹಾಕುವುದು ಸಲ್ಲದು’ ಎಂದು ಮೈಕ್ರೋಸಾಫ್ಟ್‌ ಇಂಡಿಯಾದ ಡೈರೆಕ್ಟರ್‌ (ಸ್ಟಾರ್ಟ್‌ಟಪ್ಸ್‌) ಸಂಗೀತಾ ಬಾವಿ ಸಲಹೆ ನೀಡಿದರು.

‘ವೃತ್ತಿಬದುಕು– ಕುಟುಂಬದ ದೃಷ್ಟಿಕೋನ ಬದಲಾಗಲಿ’

‘ಕಾರ್ಪೊರೇಟ್‌ ಕಂಪನಿಗಳಲ್ಲಿ ಪ್ರಮುಖ ಹುದ್ದೆ ವಹಿಸಿರುವವರಲ್ಲಿ ಮಹಿಳೆಯರ ಪಾಲು ಶೇ 3ರಷ್ಟು ಮಾತ್ರ. ಮಹಿಳೆ ಉನ್ನತ ಸ್ಥಾನಗಳಿಗೆ ಏರುವ ದಾರಿ ಸುಲಭವಲ್ಲ. ನಮ್ಮ ಸಂಸ್ಥೆಯಲ್ಲಿ ಉನ್ನತ ಹುದ್ದೆ ಅಲಂಕರಿಸಲು ಅರ್ಹತೆ ಹೊಂದಿದ್ದ ಮಹಿಳೆಯೊಬ್ಬರು ತನ್ನ ಅತ್ತೆಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಅರ್ಧದಲ್ಲೇ ಕೆಲಸ ಬಿಟ್ಟರು. ಮಹಿಳೆಯ ವೃತ್ತಿಜೀವನದ ಬಗ್ಗೆ ಕುಟುಂಬದವರು ಹಾಗೂ ಸಮಾಜ ಹೊಂದಿರುವ ದೃಷ್ಟಿಯನ್ನು ಬದಲಿಸದ ಹೊರತು ಇಂತಹ ಪ್ರಕರಣಗಳಿಗೆ ಕೊನೆ ಇಲ್ಲ’ ಎಂದು ಟೆಸ್ಕೊ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕಿ ವಿದ್ಯಾ ಲಕ್ಷ್ಮಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT