ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ನಮ್ಮ ಮೆಟ್ರೊ (ನೀಲಿ ಮಾರ್ಗ) 2026ರ ಒಳಗೆ ಪೂರ್ಣಗೊಳಿಸಬೇಕು. ಹೀಗಾಗಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯ ಮೇಲೆ ಮತ್ತು ಕೆಳಗೆ ರ‍್ಯಾಂಪ್ ಕ್ಯಾರೇಜ್ ವೇ ಲೂಪ್‌ಗಳು ಮತ್ತು ರ‍್ಯಾಂಪ್ ಮೇಲ್ಸೇತುವೆ ಸ್ಟೇಜಿಂಗ್ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ 2.5 ಮೀಟರ್‌ನಷ್ಟು ರಸ್ತೆಗೆ ಶನಿವಾರ ಬ್ಯಾರಿಕೇಡ್ ಅಳವಡಿಸಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.