ಬೆಂಗಳೂರು: ನಕಲಿ ನೋಂದಣಿ ಸಂಖ್ಯೆ ಬಳಸಿದ್ದ ಕಾರಣಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದ ಬೆನ್ಜ್ ಕಾರನ್ನು ₹ 15.75 ಲಕ್ಷಕ್ಕೆ ಹರಾಜು ಮಾಡಲಾಗಿದೆ.

ಮಂಡ್ಯದ ರಾಜುಗೌಡ ಎಂಬುವರು ಏಳು ವರ್ಷಗಳಿಂದ ನಕಲಿ ನೋಂದಣಿ ಸಂಖ್ಯೆ ಬಳಸಿ ಬೆನ್ಜ್ ಕಾರು ಓಡಿಸುತ್ತಿದ್ದರು. ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಯಶವಂತಪುರ ಆರ್ಟಿಒ ಇನ್ಸ್ಪೆಕ್ಟರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕೆಲ ತಿಂಗಳ ಹಿಂದಷ್ಟೇ ಕಾರು ಜಪ್ತಿ ಮಾಡಿತ್ತು.

ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ, ತೆರಿಗೆ ಪಾವತಿ ಮಾಡಿ ಕಾರು ಬಿಡಿಸಿಕೊಂಡು ಹೋಗುವಂತೆ ರಾಜುಗೌಡ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನಿಗದಿತ ಅವಧಿಯಲ್ಲಿ ನೋಟಿಸ್ಗೆ ಉತ್ತರ ನೀಡಿಲ್ಲ. ಹೀಗಾಗಿ, ಕಾರನ್ನು ಬುಧವಾರ ಹರಾಜು ಮಾಡಲಾಯಿತು.

’ಬೇರೊಬ್ಬರ ಕಾರಿನ ‘ಕೆಎ 05 ಎಂಡಬ್ಲ್ಯು 6201’ ನೋಂದಣಿ ಸಂಖ್ಯೆಯನ್ನೇ ರಾಜುಗೌಡ ನಕಲು ಮಾಡಿ ತಮ್ಮ ಬೆನ್ಜ್ ಕಾರಿಗೆ ಹಾಕಿಕೊಂಡಿದ್ದರು. ಹೀಗಾಗಿಯೇ ಕಾರು ಜಪ್ತಿ ಮಾಡಲಾಗಿತ್ತು’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ಉದ್ಯಮಿ ಅರ್ಜುನ್ ಎಂಬುವರು ಬೆನ್ಜ್ ಕಾರು ಖರೀದಿ ಮಾಡಿದರು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.