ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಬೆಸ್ಕಾಂ ಸಹಾಯವಾಣಿ ಬಳಕೆ

Last Updated 4 ಜುಲೈ 2020, 22:07 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸಂಬಂಧಿತ ಸಮಸ್ಯೆ ಎದುರಿಸುವವರಿಗೆ ಸ್ಫಂದಿಸಲು ಬೆಸ್ಕಾಂ ಸಹಾಯವಾಣಿ ‘1912’ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಶನಿವಾರ ರಾತ್ರಿಯಿಂದಲೇ ಅಗತ್ಯ ಮಾಹಿತಿಯನ್ನು ಈ ಸಹಾಯವಾಣಿ ಮೂಲಕ ನೀಡಲಾಗುತ್ತಿದೆ.

‘ಸೋಮವಾರದಿಂದ (ಜುಲೈ 6) ಪೂರ್ಣ ಪ್ರಮಾಣದಲ್ಲಿ ಕೋವಿಡ್‌ ಸಂಬಂಧಿತ ಮಾಹಿತಿಯನ್ನು ಬೆಸ್ಕಾಂ ಸಹಾಯವಾಣಿ ಮೂಲಕ ನೀಡಲಾಗುತ್ತದೆ. ಸದ್ಯ ಈಗ ಕರೆ ಮಾಡಿದವರಿಗೆ ಆಂಬುಲೆನ್ಸ್‌ ಅಗತ್ಯವಿದ್ದರೆ 108ಕ್ಕೆ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಣೆಗಳಿದ್ದರೆ 104ಕ್ಕೆ ಕರೆ ಮಾಡಲು ತಿಳಿಸುತ್ತಿದ್ದೇವೆ. ಅಲ್ಲದೆ, ಆಯಾ ವಲಯ ಅಧಿಕಾರಿಗಳ ದೂರವಾಣಿ ಸಂಖ್ಯೆ ನೀಡುತ್ತಿದ್ದೇವೆ’ ಎಂದು ಬೆಸ್ಕಾಂ ಸಹಾಯವಾಣಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ಅಧಿಕಾರಿಗಳು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾನುವಾರ ಈ ಕುರಿತು ಸಭೆ ಮಾಡಲಿದ್ದಾರೆ. ವಾರ್‌ ರೂಮ್‌ ಹೇಗಿರಬೇಕು, ಯಾವ ಯಾವ ಮಾಹಿತಿ ನೀಡಬೇಕು ಎಂಬ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಕುರಿತು ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಕೊರೊನಾ ಸಂಬಂಧಿಸಿದ ಮಾಹಿತಿ ನೀಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT