ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುನಂದಮ್ಮಗೆ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’

Published 7 ಮಾರ್ಚ್ 2024, 15:47 IST
Last Updated 7 ಮಾರ್ಚ್ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ನೀಡುವ 2023ನೇ ಸಾಲಿನ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ’ಗೆ ಲೇಖಕಿ ಆರ್. ಸುನಂದಮ್ಮ ಅವರ ‘ಭರತಕಲ್ಪ’ ಕಾದಂಬರಿ ಆಯ್ಕೆಯಾಗಿದೆ. 

ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ. ಕಾದಂಬರಿಕಾರ ಕಾ.ತ. ಚಿಕ್ಕಣ್ಣ, ಕಾದಂಬರಿಗಾರ್ತಿ ಲತಾಗುತ್ತಿ ಅವರು ಈ ಆಯ್ಕೆ ಮಾಡಿದ್ದಾರೆ. ಸ್ಪರ್ಧೆಗೆ 48 ಕಾದಂಬರಿಗಳು ಬಂದಿದ್ದವು. ಅವುಗಳಲ್ಲಿ ಅಂತಿಮ ಮೂರರಲ್ಲಿ ಸುನಂದಮ್ಮ ಅವರ ಕಾದಂಬರಿ ಜತೆಗೆ ಚೀಮನಹಳ್ಳಿ ರಮೇಶ್ ಬಾಬು ಅವರ ‘ಮಂಪರು’ ಕಾದಂಬರಿ ಹಾಗೂ ಗಂಗಪ್ಪ ತಳವಾರ್ ಅವರ ‘ಧಾವತಿ’ ಕಾದಂಬರಿಗಳು ಸ್ಥಾನ ಪಡೆದಿದ್ದವು. 

ದ್ವಾರನಕುಂಟೆ ಪಾತಣ್ಣ ಅವರ ಜನ್ಮದಿನವಾದ ಇದೇ 14ರಂದು ಸಂಜೆ 5.30ಕ್ಕೆ ಶೇಷಾದ್ರಿಪುರಂ ಕಾಲೇಜು ದತ್ತಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT