ಗುರುವಾರ , ಅಕ್ಟೋಬರ್ 21, 2021
22 °C

ಭಾರತ್‌ ಬಂದ್: ರಾಜಧಾನಿಯಲ್ಲಿ‌ ಪ್ರತಿಭಟನಾ‌ ಮೆರವಣಿಗೆ ಆರಂಭ- ಬಿಗಿ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ್ ಬಂದ್ ಬೆಂಬಲಿಸಿ‌ ನಗರದಲ್ಲಿ ಪ್ರತಿಭಟನಾ‌ ಮೆರವಣಿಗೆ ‌ಆರಂಭವಾಗಿದೆ.
ಆನಂದರಾವ್ ವೃತ್ತದ ಗಾಂಧಿ‌ ಪ್ರತಿಮೆ, ಸ್ವಾತಂತ್ರ್ಯ ‌ಉದ್ಯಾನ, ಕೆ.ಆರ್. ವೃತ್ತ, ನೃಪತುಂಗ ರಸ್ತೆ ಮೂಲಕ ಮೆರವಣಿಗೆ ಸಾಗುತ್ತಿದೆ.‌ ಮೈಸೂರು ಬ್ಯಾಂಕ್ ವೃತ್ತದಲ್ಲಿ‌ ಮೆರವಣಿಗೆ ಅಂತ್ಯವಾಗಲಿದೆ. ಅಲ್ಲಿಯೇ ಬಹಿರಂಗ‌ ಸಭೆ ನಡೆಯಲಿದೆ. 

ಕನ್ನಡಪರ‌ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳು ಮೆರವಣಿಗೆಯಲ್ಲಿ‌ ಪಾಲ್ಗೊಂಡಿವೆ.

ಮೆರವಣಿಗೆ ಸಾಗುತ್ತಿರುವ‌ ರಸ್ತೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. 
ಅಕ್ಕ-ಪಕ್ಕದ‌ ಅಂಗಡಿ, ಕಚೇರಿ‌ ಮುಚ್ಚಿಸಲು ಪ್ರತಿಭಟನಕಾರರು ಯತ್ನಿಸುತ್ತಿದ್ದಾರೆ. ಅವರು ಯತ್ನವನ್ನು ಪೊಲೀಸರು ವಿಫಲಗೊಳಿಸಿ ಮೆರವಣಿಗೆ ಮುಂದಕ್ಕೆ ಕಳುಹಿಸುತ್ತಿದ್ದಾರೆ.
ಮೆರವಣಿಗೆಯಿಂದಾಗಿ‌ ಮೆಜೆಸ್ಟಿಕ್, ಕಾರ್ಪೋರೇಷನ್ ‌ಹಾಗೂ‌ ಸುತ್ತಮುತ್ತ ರಸ್ತೆಗಳಲ್ಲಿ‌ ವಾಹನಗಳ ದಟ್ಟಣೆ ಉಂಟಾಗಿದೆ. ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು