ಮಂಗಳವಾರ, ಸೆಪ್ಟೆಂಬರ್ 21, 2021
21 °C

ಟ್ಯಾಬ್, ದಿನಸಿ ಕಿಟ್‌ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭೀಮಾ ಜ್ಯುವೆಲ್ಲರ್ಸ್‌ನ ಕೋರಮಂಗಲದ ಮಳಿಗೆಯಲ್ಲಿ ಸಂಸ್ಥೆಯ 97ನೇ ಸಂಸ್ಥಾಪನಾ ದಿನದ ಅಂಗವಾಗಿ ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ಹಾಗೂ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.

ಕೋವಿಡ್‌ನಿಂದ ಸಂಕಷ್ಟ ಅನುಭವಿಸಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಒನ್ ಬಿಲಿಯನ್ ಲಿಟರೇಟ್ಸ್ ಫೌಂಡೇಷನ್ ಮೂಲಕ ₹4.75 ಲಕ್ಷ ವೆಚ್ಚದಲ್ಲಿ 50 ಟ್ಯಾಬ್‌ಗಳನ್ನು ಬಡ ವಿದ್ಯಾರ್ಥಿಗಳಿಗೆ ನೀಡಲಾಯಿತು.

ನಾಗವಾರ ಪಾಳ್ಯ, ಕಗ್ಗದಾಸಪುರ, ವಿದ್ಯಾರಣ್ಯಪುರದ ವಲಸೆ ಮತ್ತು ದಿನಗೂಲಿ ನೌಕರರು ಹಾಗೂ ತೃತೀಯ ಲಿಂಗಿಗಳು ಸೇರಿದಂತೆ 500 ಮಂದಿಗೆ ₹5 ಲಕ್ಷ ವೆಚ್ಚದಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಿತು.

ಭೀಮಾ ಜ್ಯುವೆಲ್ಲರ್ಸ್‍ನ ಬೆಂಗಳೂರು ವಿಭಾಗದ ವಿಷ್ಣು ಶರಣ್ ಕೆ.ಭಟ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.