ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಂಟಿಸಿ: ‘ಭೋಜನ ಬಂಡಿ’- ತಾಂತ್ರಿಕ ಸಿಬ್ಬಂದಿಗೆ ಸನ್ಮಾನ

Published : 26 ಆಗಸ್ಟ್ 2024, 16:22 IST
Last Updated : 26 ಆಗಸ್ಟ್ 2024, 16:22 IST
ಫಾಲೋ ಮಾಡಿ
Comments

ಬೆಂಗಳೂರು: ಸಂಚಾರ ನಿಲ್ಲಿಸಿದ ಬಸ್‌ ಅನ್ನು ಭೋಜನ ಬಂಡಿಯನ್ನಾಗಿ ಪರಿವರ್ತಿಸಿದ ಬಿಎಂಟಿಸಿ ತಾಂತ್ರಿಕ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಬಿಎಂಟಿಸಿ ಉತ್ತರ ವಲಯದಲ್ಲಿ 10.64 ಲಕ್ಷ ಕಿ.ಮೀ. ಕ್ರಮಿಸಿದ್ದ ಲೇಲ್ಯಾಂಡ್‌ ವಾಹನವನ್ನು ದಾಸನಪುರದಲ್ಲಿರುವ ಕೇಂದ್ರೀಯ ಕಾರ್ಯಾಗಾರ-4ರ ತಾಂತ್ರಿಕ ಸಿಬ್ಬಂದಿ ಭೋಜನ ಬಂಡಿಯನ್ನಾಗಿ ಪರಿವರ್ತಿಸಿದ್ದರು.

ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಾಂತ್ರಿಕ ಸಿಬ್ಬಂದಿ ಮತ್ತು ಚಾಲನಾ ಸಿಬ್ಬಂದಿಯನ್ನು ಸನ್ಮಾನಿಸಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ  ರಾಮಚಂದ್ರನ್ ಆರ್., ನಿರ್ದೇಶಕಿ ಶಿಲ್ಪಾ ಎಂ. ಮತ್ತು ಮುಖ್ಯ ತಾಂತ್ರಿಕ ಎಂಜಿನಿಯರ್‌ ಎ.ಎನ್. ಗಜೇಂದ್ರ ಕುಮಾರ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ಬನ್ನಿ, ಕುಳಿತು ಊಟ ಮಾಡೋಣ ಎಂಬ ಘೋಷವಾಕ್ಯದೊಂದಿಗೆ ಭೋಜನ ಬಂಡಿ ಡಿಪೊ 8ರಲ್ಲಿ ಆರಂಭಗೊಂಡಿದೆ. ಮುಂದೆ ಎಲ್ಲ ಡಿಪೊಗಳಲ್ಲಿ ಇದೇ ರೀತಿ ಭೋಜನ ಬಂಡಿ ಆರಂಭಿಸುವ ಗುರಿ ಇದೆ’ ಎಂದು ಸಚಿವರು ತಿಳಿಸಿದರು.

ಕ್ಯಾಂಟೀನ್ ಕಟ್ಟಡಗಳಿಲ್ಲದ ನೂತನವಾಗಿ ನಿರ್ಮಿತವಾಗಿರುವ ಘಟಕಗಳು/ಬಸ್ ನಿಲ್ದಾಣಗಳಲ್ಲಿ ಭೋಜನ ಬಂಡಿ ಬಳಕೆಯಾಗಲಿದೆ. ಕುಳಿತುಕೊಳ್ಳಲು ಆಸನ ಮತ್ತು ಟೇಬಲ್ ವ್ಯವಸ್ಥೆ, ಫ್ಯಾನ್‌, ವಾಶ್ ಬೇಸಿನ್‌, ಕುಡಿಯುವ ನೀರು, ಗಾಳಿ ಬೆಳಕಿನ ವ್ಯವಸ್ಥೆ ಇದರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT