ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆಯು ಇದೇ ಶನಿವಾರ (ಜ.10) ಮಧ್ಯಾಹ್ನ 3.30ಕ್ಕೆ ನಾಗರಬಾವಿಯ ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್ನಲ್ಲಿರುವ ಕಿಂಗ್ಸ್ ಕ್ಲಬ್ನಲ್ಲಿ 35ನೇ ಆವೃತ್ತಿಯ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಗೋಲ್ಡ್ ವಿನ್ನರ್’ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಡುಗೆ ತಯಾರಿ, ಸಂಗೀತ ಕಾರ್ಯಕ್ರಮ ಸೇರಿ ಹಲವು ವಿಶಿಷ್ಟತೆಯನ್ನು ಈ ಕಾರ್ಯಕ್ರಮ ಒಳಗೊಂಡಿರಲಿದೆ. 2022ರಲ್ಲಿ ಪ್ರಾರಂಭವಾದ ಈ ವೇದಿಕೆಯು, ರಾಜ್ಯದಾದ್ಯಂತ 34 ಕಾರ್ಯಕ್ರಮಗಳನ್ನು ನಡೆಸಿದೆ. ಬೆಂಗಳೂರಿನಲ್ಲಿ 15ನೇ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಯಾದ ‘ಕರ್ಣ’ದ ನಟಿ ಶ್ಯಾಮ್ ಕನ್ವರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಕ್ಕಳ ಫ್ಯಾಷನ್ ಶೋ, ರ್ಯಾಂಪ್ ವಾಕ್, ಪ್ರತಿಭಾ ಪ್ರದರ್ಶನ, ರಸಪ್ರಶ್ನೆ ಸೇರಿ ವಿವಿಧ ಚಟುವಟಿಕೆಗಳು ನಡೆಯಲಿವೆ. ಡಬ್ಲ್ಯುಐಸಿಸಿಐ ಲೀಡರ್ಶಿಪ್ ಕೋಚಿಂಗ್ ಕೌನ್ಸಿಲ್ನ ಅಧ್ಯಕ್ಷೆ ಆಶಾ ಬಿರಾದಾರ್ ಅವರು ‘ಕೌಶಲದಿಂದ ಆದಾಯ’ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕೌಶಲ ವೃದ್ಧಿ ಹಾಗೂ ಆದಾಯ ಗಳಿಕೆಗೆ ಇರುವ ಅವಕಾಶಗಳ ಬಗ್ಗೆ ತಿಳಿಯಲು ಈ ಗೋಷ್ಠಿ ಸಹಕಾರಿಯಾಗಲಿದೆ.

ಫಿಟ್ನೆಸ್ ತಜ್ಞೆ ಚಂದನಾ ಲಕ್ಷ್ಮಿಕಾಂತ್ ಅವರು ‘ಜುಂಬಾ’ ನೃತ್ಯ ಪ್ರದರ್ಶನ ಪ್ರಸ್ತುತಪಡಿಸಲಿದ್ದಾರೆ. ಗಾಯಕಿ ಅನಘಾ ಎಂ. ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಡುಗೆ ತಯಾರಿ ಸ್ಪರ್ಧೆಯೂ ಇರಲಿದೆ.

ಹೊಸ ವಿಷಯಗಳನ್ನು ಕಲಿಯಲು, ಸಮಾನ ಮನಸ್ಕರೊಂದಿಗೆ ಬೆರೆಯಲು, ಸೃಜನಶೀಲತೆ ಪ್ರದರ್ಶಿಸಲು, ಆರೋಗ್ಯ ಮತ್ತು ಕ್ಷೇಮ ಜಗತ್ತಿನ ಬಗ್ಗೆ ಮಾಹಿತಿ ಪಡೆಯಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಪ್ರೇಕ್ಷಕರಿಗೆ ವಿವಿಧ ಸ್ಪರ್ಧೆ ಇರಲಿದ್ದು, ಭಾಗವಹಿಸಿದವರಿಗೆ ಅಚ್ಚರಿ ಉಡುಗೊರೆ ಪಡೆಯುವ ಅವಕಾಶಗಳು ಇರಲಿವೆ.

ಒಬ್ಬ ಅದೃಷ್ಟ ಪ್ರೇಕ್ಷಕರಿಗೆ ₹ 15 ಸಾವಿರ ಮೌಲ್ಯದ ವಾಟರ್ ಪ್ಯೂರಿಫೈಯರ್ ಗೆಲ್ಲುವ ಅವಕಾಶ ಇರಲಿದೆ. 10 ಅದೃಷ್ಟಶಾಲಿ ಪ್ರೇಕ್ಷಕರಿಗೆ ಮಲ್ಟಿಪ್ಲೆಕ್ಸ್ನಲ್ಲಿ ಚಲನಚಿತ್ರ ವೀಕ್ಷಣೆಗೆ ತಲಾ ಎರಡು ಟಿಕೆಟ್ಗಳನ್ನು ಗೆಲ್ಲುವ ಅವಕಾಶ, ಅದೃಷ್ಟಶಾಲಿಗಳಿಗೆ ನಾಗರಬಾವಿಯ ಕಿಂಗ್ಸ್ ಕ್ಲಬ್ನಲ್ಲಿ ಕುಟುಂಬ ಸಹಿತ ಭೋಜನದ ವೋಚರ್ ಸಿಗಲಿದೆ.

ಪ್ರವೇಶ ಉಚಿತ ಇರಲಿದ್ದು, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ವಿವರಕ್ಕೆ ಸಂಪರ್ಕ ಸಂಖ್ಯೆ: 9035036186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.