ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಟ್‌ ಕಾಯಿನ್’ ವಂಚನೆ: ಬೆಳಗಾವಿಯಲ್ಲಿ ಇಬ್ಬರ ಬಂಧನ

Last Updated 28 ಮಾರ್ಚ್ 2022, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ರಿಪ್ಟೊ’ ಹಾಗೂ ‘ಬಿಟ್ ಕಾಯಿನ್’ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

‘ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಹಾರೋಗೇರಿಯ ಕಿರಣ್ ಭರತೇಶ್ (20) ಹಾಗೂ ಅರ್ಷದ್ ಮೊಹಿನುದ್ದೀನ್ (21) ಬಂಧಿತರು. ಎರಡು ಮೊಬೈಲ್, ಮೂರು ಸಿಮ್‌ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ₹ 40 ಸಾವಿರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹೂಡಿಕೆ ಹೆಸರಿನಲ್ಲಿ ಹಣ ಕಳೆದುಕೊಂಡಿದ್ದ ನಗರದ ನಿವಾಸಿಯೊಬ್ಬರು ಮಾರ್ಚ್ 18ರಂದು ದೂರು ನೀಡಿದ್ದರು. ತನಿಖೆ ಕೈಗೊಂಡು ಹಾರೋಗೇರಿಯಲ್ಲೇ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದೂ ತಿಳಿಸಿದರು.

ಇನ್‌ಸ್ಟಾಗ್ರಾಮ್‌ದಲ್ಲಿ ಜಾಹೀರಾತು: ‘ಇನ್‌ಸ್ಟಾಗ್ರಾಮ್‌ ಆ್ಯಪ್‌ನಲ್ಲಿ ‘ಅಭಿಷೆ ಅಕ್ವಾನೆ – ತರುಣ ಕ್ರಿಪ್ಟೊ ಟ್ರೇಡರ್’ ಹೆಸರಿನಲ್ಲಿ ಖಾತೆ ತೆರೆದಿದ್ದ ಆರೋಪಿಗಳು, ಅದರ ಮೂಲಕ ಜನರನ್ನು ಸಂಪರ್ಕಿಸಿ ವಂಚಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಹಣ ಹೂಡಿಕೆ ಮಾಡಿದರೆ, ಶೇ 60ರಷ್ಟು ಲಾಭ ಖಚಿತ’ ಎಂಬುದಾಗಿ ಆರೋಪಿಗಳು ಜಾಹೀರಾಜು ನೀಡುತ್ತಿದ್ದರು. ಅದು ನಿಜವೆಂದು ನಂಬಿ ಹಲವರು ಹಣ ಹೂಡಿಕೆ ಮಾಡುತ್ತಿದ್ದರು. ಹಣ ಪಡೆದ ನಂತರ ಆರೋಪಿಗಳು ಯಾವುದೇ ಲಾಭ ನೀಡುತ್ತಿರಲಿಲ್ಲ. ಅಸಲನ್ನೂ ಮರಳಿಸುತ್ತಿರಲಿಲ್ಲ’ ಎಂದೂ ತಿಳಿಸಿದರು.

‘ನಗರದ ಹಲವರನ್ನು ಆರೋಪಿಗಳು ವಂಚಿಸಿದ್ದಾರೆ. ಇವರ ವಿರುದ್ಧ ದಕ್ಷಿಣ ಸೈಬರ್ ಕ್ರೈಂ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT