ಮೆಟ್ರೊ ಪ್ರಯಾಣಿಕರಿಗೆ ಸಿಹಿಸುದ್ದಿ; ಇನ್ಮುಂದೆ ಪಾಸ್ ಪಡೆದು ಪ್ರಯಾಣಿಸಬಹುದು

ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ದಿನದ ಮತ್ತು ಮೂರು ದಿನದ ಪಾಸ್ಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಪರಿಚಯಿಸಿದೆ.
ಏ.2ರಿಂದ ಈ ಯೋಜನೆಗೆ ಚಾಲನೆ ದೊರಯಲಿದೆ. ₹200 ದರದ ಒಂದು ದಿನದ ಪಾಸ್ ಖರೀದಿಸಿದವರು ಆ ದಿನ ಮೆಟ್ರೊ ರೈಲಿನಲ್ಲಿ ಅನಿಯಮಿತವಾಗಿ ಪ್ರಯಾನಿಸಬಹುದು. ₹400 ಮೊತ್ತದ ಪಾಸ್ ಖರೀದಿಸಿದವರು ಮೂರು ದಿನ ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ ಇದೆ. ಎರಡೂ ಪಾಸ್ಗಳಲ್ಲಿ ಮರುಪಾವತಿಸಬಹುದಾದ ₹50 ಭದ್ರತಾ ಠೇವಣಿ ಒಳಗೊಂಡಿರುತ್ತದೆ.
ಪಾಸ್ಗಳು ನಿಲ್ದಾಣದ ಟಿಕೆಟ್ ಕೌಂಟರ್ಗಳಲ್ಲಿ ಲಭ್ಯವಿರುತ್ತದೆ. ಪ್ರಯಾಣ ಪೂರ್ಣಗೊಳಿಸಿದ ನಂತರ ಉತ್ತಮ ಸ್ಥಿತಿಯಲ್ಲಿರುವ ಸ್ಮಾರ್ಟ್ ಕಾರ್ಡ್ಗಳನ್ನು (ಪಾಸ್) ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಹಿಂದಿರುಗಿಸಿದರೆ ಭದ್ರತಾ ಠೇವಣಿ ₹50 ಹಿಂಪಡೆಯಬಹುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಸ್ಮಾರ್ಟ್ ಕಾರ್ಡ್ಗೆ ರೀಚಾರ್ಜ್ ಮಾಡಿಕೊಂಡು 15 ದಿನಗಳಲ್ಲಿ ಬಳಕೆ ಮಾಡಲು ಸಾಧ್ಯವಾಗದಿದ್ದರೆ ವಾಪಸ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 30 ದಿನಗಳ ಶೇ 2.5ರಷ್ಟು ರದ್ದತಿ ಶುಲ್ಕ ಕಡಿತಗೊಳಿಸಿ ಬಾಕಿ ಮೊತ್ತ ಪಾವತಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.