ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಈ ವರ್ಷ ಇಲ್ಲಿಯವರೆಗೆ ₹60 ಸಾವಿರ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಿದೆ.

ಪಾಸುಗಳನ್ನು ಸಂಸ್ಥೆಯ 15 ಬಸ್ ನಿಲ್ದಾಣಗಳಲ್ಲಿ 66 ಕೌಂಟರ್‌ಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ 1.54 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸರಿಯಾದ ಮಾಹಿತಿ ಸಲ್ಲಿಸದ ಕಾರಣ 20,662 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸುವಂತೆ ಎಸ್ಎಂಎಸ್/ಇ-ಮೇಲ್ ಮೂಲಕ ತಿಳಿಸಲಾಗಿದೆ.

26,668 ಅರ್ಜಿಗಳು ಶಿಕ್ಷಣ ಸಂಸ್ಥೆಗಳಿಂದ ಅನುಮೋದನೆಯಾಗಬೇಕಾಗಿದ್ದು, ಈ ಅರ್ಜಿಗಳನ್ನು ಶಿಕ್ಷಣ ಸಂಸ್ಥೆಗಳಿಂದ ಅನುಮೋದಿಸುವಂತೆ ಈಗಾಗಲೇ ಇ-ಮೇಲ್ ಮೂಲಕ ಸಂಸ್ಥೆಯು ಕೋರಿದೆ. 46,768 ವಿದ್ಯಾರ್ಥಿಗಳ ಅರ್ಜಿಗಳನ್ನು ಅನುಮೋದಿಸಿದ್ದು, ವಿದ್ಯಾರ್ಥಿಗಳು ಪಾಸು ಪಡೆಯುವ ವೇಳೆ, ದಿನಾಂಕ, ಸ್ಥಳವನ್ನು ನಿಗದಿಪಡಿಸಿಕೊಂಡು ಪಾಸನ್ನು ಪಡೆಯಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.