ಬೆಂಗಳೂರು: ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಬಸ್ಗಳಲ್ಲಿ ಸಾಮಾನ್ಯ ದಿನಗಳಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ, ಅಂದರೆ 61.47 ಲಕ್ಷ ಪ್ರಯಾಣಿಸಿದ್ದಾರೆ.

‘ಸಾಮಾನ್ಯ ದಿನಗಳಲ್ಲಿ ಹೆಚ್ಚೆಂದರೆ 28 ಲಕ್ಷ ಜನ ಪ್ರಯಾಣಿಸುತ್ತಾರೆ. ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಉಚಿತ ಪ್ರಯಾಣಕ್ಕೆ ಸೋಮವಾರ ಅವಕಾಶ ಕಲ್ಪಿಸಿದ್ದ ದಿನ ನಿರೀಕ್ಷೆಗೂ ಮೀರಿ ಜನ ಪ್ರಯಾಣಿಸಿದ್ದಾರೆ’ ಎಂದು ಬಿಎಂಟಿಸಿ ತಿಳಿಸಿದೆ.

ಸರಣಿ ರಜೆ ಇದ್ದರೂ ಲಾಲ್ಬಾಗ್ನಲ್ಲಿ ಇದ್ದ ಫಲಪುಷ್ಪ ಪ್ರದರ್ಶನ ಮತ್ತು ಕಾಂಗ್ರೆಸ್ ‘ಸ್ವಾತಂತ್ರ್ಯ ನಡಿಗೆ’ಯೂ ಇದಕ್ಕೆ ಕಾರಣ ಎನ್ನಲಾಗಿದೆ. ಅಂದು 5,300 ಬಸ್ಗಳನ್ನು ಬಿಎಂಟಿಸಿ ಕಾರ್ಯಾಚರಣೆಗೆ ಇಳಿಸಿತ್ತು. ಸಾಮಾನ್ಯ ದಿನಗಳಿಗಿಂತ ಹೆಚ್ಚುವರಿ 500 ಬಸ್ಗಳು ರಸ್ತೆಗೆ ಇಳಿದಿದ್ದವು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.