ವಜ್ರ ಬಸ್: ದೈನಿಕ, ಮಾಸಿಕ ಪಾಸ್ ದರ ಇಂದಿನಿಂದ ಏರಿಕೆ

ಬೆಂಗಳೂರು: ಬಿಎಂಟಿಸಿಯು ‘ವಜ್ರ ಸೇವೆಯ ಬಸ್’ಗಳ ದೈನಿಕ ಹಾಗೂ ಮಾಸಿಕ ಪಾಸಿನ ದರವನ್ನು ಏರಿಕೆ ಮಾಡಿದ್ದು, ಜ.1ರಿಂದ ಹೊಸ ದರಗಳು ಜಾರಿಗೆ ಬರಲಿವೆ.
ಇಂಧನ ಬೆಲೆ ಏರಿಕೆಯಾಗಿದ್ದು, ಸಂಸ್ಥೆಯ ಆರ್ಥಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ದರ ಏರಿಕೆ ಮಾಡಲಾಗುತ್ತಿದೆ. ಸಾಮಾನ್ಯ ಮಾಸಿಕ ಪಾಸುದಾರರು ಮತ್ತು ಹಿರಿಯ ನಾಗರಿಕ ಸಾಮಾನ್ಯ ಮಾಸಿಕ ಪಾಸುದಾರರು ಭಾನುವಾರದಂದು ಮಾನ್ಯತಾ ಪಾಸಿನ ಜತೆಗೆ ವಜ್ರ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕಲ್ಪಿಸಿದ್ದ ಸೌಲಭ್ಯವನ್ನು ವಾಪಸ್ ಪಡೆಯಲಾಗಿದೆ.
ವಜ್ರ ಮಾಸಿಕ ಪಾಸು ₹ 1,500ರಿಂದ ₹ 1,800ಕ್ಕೆ, ವಜ್ರ ದೈನಿಕ ಪಾಸಿನ ದರವನ್ನು ₹ 100ರಿಂದ ₹ 120ಕ್ಕೆ, ಸಾಮಾನ್ಯ ಮಾಸಿಕ ಪಾಸುದಾರರು ವಜ್ರ ವಾಹನಗಳಲ್ಲಿ ಪ್ರತಿ ಪ್ರಯಾಣಕ್ಕೆ ನೀಡಬೇಕಿದ್ದ ಚೀಟಿ ದರವನ್ನು ₹ 20ರಿಂದ ₹ 25ಕ್ಕೆ ಹಾಗೂ ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ಪಾಸುದಾರರ ಪ್ರತಿ ಪ್ರಯಾಣದ ಚೀಟಿ ದರವನ್ನು ₹ 20ರಿಂದ 25ಕ್ಕೆ ಏರಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.