‘ಸಂಪಿಗೆ ರಸ್ತೆ: ವೈಟ್ಟಾಪಿಂಗ್ 15 ದಿನಗಳಲ್ಲಿ ಪೂರ್ಣ’

ಬೆಂಗಳೂರು: ಮಲ್ಲೇಶ್ವರದ ಸಂಪಿಗೆ ರಸ್ತೆಯ ವೈಟ್ಟಾಪಿಂಗ್ ಕಾಮಗಾರಿ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಸಂಪಿಗೆ ರಸ್ತೆಯಲ್ಲಿ ಕಾಮಗಾರಿಯನ್ನು 15 ದಿನಗಳ ಹಿಂದೆ ಆರಂಭಿಸಲಾಗಿದೆ. ಕಾಂಕ್ರಿಟೀಕೃತ ರಸ್ತೆಯ ಕ್ಯೂರಿಂಗ್ ಅವಧಿ ಪೂರ್ಣಗೊಂಡಿದೆ. ಅಂತಿಮ ಸ್ಪರ್ಶ ನೀಡುವ ಕೆಲಸ ಬಾಕಿ ಇದ್ದು, ಅವುಗಳು 15 ದಿನಗಳಲ್ಲಿ ಪೂರ್ಣಗೊಳ್ಳಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಮಲ್ಲೇಶ್ವರದಲ್ಲಿ ಜಲಮಂಡಳಿಯವರು ಕುಡಿಯುವ ನೀರು ಪೂರೈಕೆಯ ಹಳೆಯ ಕೊಳವೆಗಳನ್ನು ಬದಲಾಯಿಸುತ್ತಿದ್ದಾರೆ. ಈ ಕಾರ್ಯವೂ
ಶೀಘ್ರವೇ ಪೂರ್ಣಗೊಳ್ಳಲಿದೆ. ಬಳಿಕ ಮಲ್ಲೇಶ್ವರ ಎಲ್ಲ ರಸ್ತೆ ಸುಸ್ಥಿತಿಗೆ ತರುವ ಕೆಲಸವನ್ನು ಯುದ್ಧೋಪಾದಿ
ಯಲ್ಲಿ ನಿರ್ವಹಿಸಲಿದ್ದೇವೆ’
ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.