ಬೆಂಗಳೂರು: ಒಂದೆಡೆ ಗಹನವಾದ ಸಾಹಿತ್ಯ ಚರ್ಚೆಗಳು ವಿವಿಧ ಭಾಷೆಗಳ ಬೆಸುಗೆಗೆ ಕಾರಣವಾದರೆ, ಇನ್ನೊಂದೆಡೆ ಮಕ್ಕಳ ಕಲರವ ಪಾಲಕರ ಸಂಭ್ರಮವನ್ನು ಇಮ್ಮಡಿಸಿತ್ತು. ಪುಸ್ತಕದ ಜೋಳಿಗೆ ಹೊತ್ತ ಸಾಹಿತ್ಯ ಪ್ರೇಮಿಗಳು ಸರದಿಯಲ್ಲಿ ನಿಂತು ನೆಚ್ಚಿನ ಲೇಖಕರ ಹಸ್ತಾಕ್ಷರ ಪಡೆದರೆ, ಸಾಹಿತಿಗಳು ‘ಅಂಗಳ’ದಲ್ಲಿ ಕುಳಿತು ಭಾಷೆಯ ಬಗೆಗೆ ಹೊಸ ಹೊಳಹು ನೀಡಿದರು.

ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಎಂಟು ವೇದಿಕೆಗಳು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆದುಕೊಂಡವು. ಕನ್ನಡ ಮತ್ತು ಇಂಗ್ಲಿಷ್ ಜತೆಗೆ ತಮಿಳು, ತೆಲುಗು, ಮಲೆಯಾಳ ಹಾಗೂ ಮರಾಠಿ ಭಾಷೆಯಲ್ಲಿಯೂ ವಿವಿಧ ಗೋಷ್ಠಿಗಳು ನಡೆದವು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಮೊದಲ ದಿನದ ವಿವಿಧ ಕಾರ್ಯಕ್ರಮಗಳಿಗೆ ಸಾವಿರಾರು ಸಾಹಿತ್ಯ ಪ್ರೇಮಿಗಳು ಸಾಕ್ಷಿಯಾದರು.

ಸಭಾಂಗಣದ ಆವರಣದಲ್ಲಿ ತೂಗು ಬಿಟ್ಟಿದ್ದ ವಿವಿಧ ಭಾಷೆಗಳ ಅಕ್ಷರಗಳು ಭಾಷಾ ಬೆಸುಗೆಯನ್ನು ಪ್ರತಿಬಿಂಬಿಸುವಂತಿತ್ತು. ಇದಕ್ಕೆ ಪೂರಕ ಎಂಬಂತೆ ಪಾಲ್ಗೊಂಡಿದ್ದ ವಿವಿಧ ಭಾಷೆಗಳ ಬರಹಗಾರರು ಇದೇ ಸೂರಿನಡಿ ಆಂಗ್ಲ ಭಾಷೆಯನ್ನು ಸಂಪರ್ಕ ಸೇತುವೆಯಾಗಿ ಬಳಸಿ, ಸಾಹಿತ್ಯ ಚಟುವಟಿಕೆಗಳ ಬಗ್ಗೆ ಸಮಾಲೋಚನೆ ಹಾಗೂ ಚರ್ಚೆ ನಡೆಸಿದರು. ಸಭಾಂಗಣದ ಆವರಣದಲ್ಲಿ ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ವತಿಯಿಂದ ವಿವಿಧ ವಾದ್ಯ ಪರಿಕರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದ್ದು, ಈ ವಾದ್ಯಗಳನ್ನು ನುಡಿಸಿದಾಗ ಹೊರಹೊಮ್ಮುವ ನಾದವನ್ನು ಡಿಜಿಟಲ್ ಸಾಧನದ ನೆರವಿನಿಂದ ಅನುಭವಿಸುವ ಅವಕಾಶವನ್ನೂ ನೀಡಲಾಗಿದೆ. ವರ್ಚುವಲ್ ರಿಯಾಲಿಟಿ ಅನುಭವವೂ ಇಲ್ಲಿ ಲಭ್ಯ.

ಸಾಹಿತ್ಯ, ಸಿನಿಮಾ, ಭಾಷೆ, ಸಾಮಾಜಿಕ ಮಾಧ್ಯಮ ಸೇರಿ ಹಲವು ವಿಷಯಗಳ ಬಗ್ಗೆ ಒಳನೋಟಗಳಿಂದ ಕೂಡಿದ ಚರ್ಚೆ–ಸಂವಾದಗಳಿಗೆ ಉತ್ಸವ ವೇದಿಕೆ ಕಲ್ಪಿಸಿತು. ‘ಮಂಟಪ’, ‘ಮಥನ’, ‘ಅಕ್ಷರ’, ‘ಅಂಗಳ’, ‘ಮುಖಾಮುಖಿ’ ವೇದಿಕೆಗಳಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಆಗುಹೋಗುಗಳ ಬಗ್ಗೆ ಒಂದೆಡೆ ಚಿಂತನ ಮಂಥನ ನಡೆದರೆ, ಇನ್ನೊಂದೆಡೆ ಇತ್ತೀಚಿನ ಕೃತಿಗಳ ಹೂರಣಗಳ ಬಗ್ಗೆ ಅವಲೋಕನ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಮೆರಗು ಹೆಚ್ಚಿಸಿದವು. ಮಧ್ಯಾಹ್ನ ನಡೆದ ಲಕ್ಷ್ಮಿ ಚಂದ್ರಶೇಖರ್ ಅವರ ಏಕವ್ಯಕ್ತಿ ಪ್ರದರ್ಶನ ‘ಸಿಂಗಾರವ್ವ’ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ರಂಗಕರ್ಮಿ ಬಿ. ಜಯಶ್ರೀ ಮತ್ತು ತಂಡವು ರಂಗ ಗೀತೆಗಳನ್ನು ಪ್ರಸ್ತುತಪಡಿಸಿತು.

ವಿವಿಧ ಕರಕುಶಲ ವಸ್ತುಗಳು, ಆಟಿಕೆಗಳು, ಬಟ್ಟೆಗಳು ಹಾಗೂ ತಿನಿಸುಗಳ ಮಳಿಗೆಗಳೂ ಉತ್ಸವದಲ್ಲಿದ್ದವು. ಇದರಿಂದಾಗಿ ಗಹನವಾದ ಚರ್ಚಾ ಗೋಷ್ಠಿಗಳಿಗೆ ಕಿವಿಯಾದರೂ, ಇಲ್ಲಿಯೂ ಹೆಜ್ಜೆ ಹಾಕಿ ವಿವಿಧ ವಸ್ತುಗಳನ್ನು ಖರೀದಿಸಿ ಮನೆಗೆ ತೆರಳಿದರು.

ಸುಶೀಲಾಗೆ ‘ಕಾದಂಬರಿ ಪುರಸ್ಕಾರ’

ಬುಕ್ ಬ್ರಹ್ಮ ಸಂಸ್ಥೆ ಹಮ್ಮಿಕೊಂಡಿದ್ದ ‘ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ’ ಸ್ಪರ್ಧೆಯ ಫಲಿತಾಂಶವನ್ನು ಉತ್ಸವದಲ್ಲಿ ಘೋಷಿಸಲಾಯಿತು. ‘ಪ್ರಜಾವಾಣಿ’ಯ ಉಪ ಸಂಪಾದಕಿ ಸುಶೀಲಾ ಡೋಣೂರ ಅವರ ‘ಪೀಜಿ’ ಕಾದಂಬರಿ ಈ ಪುರಸ್ಕಾರಕ್ಕೆ ಭಾಜನವಾಯಿತು.

ಈ ಪ್ರಶಸ್ತಿಯು ₹ 1 ಲಕ್ಷ ನಗದು ಸಹಿತ ಪ್ರಶಸ್ತಿ ಫಲಕ ಒಳಗೊಂಡಿದೆ. ಈ ಪುಸ್ತಕವನ್ನು ‘ಅಂಕಿತ ಪುಸ್ತಕ’ ಪ್ರಕಟಿಸಿದೆ. ಪ್ರಶಸ್ತಿಯ ನಗದಿನಲ್ಲಿ ₹ 75 ಸಾವಿರ ಲೇಖಕರಿಗೆ ಹಾಗೂ ₹ 25 ಸಾವಿರ ಪ್ರಕಾಶಕರಿಗೆ ನೀಡಲಾಯಿತು. ರಾಜಶೇಖರ ಹಳೆಮನೆ ಅವರ ‘ಒಡಲುಗೊಂಡವರು’ ಗುರುಪ್ರಸಾದ್ ಕಂಟಲಗೆರೆ ಅವರ ‘ಅಟ್ರಾಸಿಟಿ’ ದೀಪಾ ಜೋಶಿ ಅವರ ‘ತತ್ರಾಣಿ’ ಹಾಗೂ ತುಂಬಾಡಿ ರಾಮಯ್ಯ ಅವರ ‘ಜಾಲ್ಗಿರಿ’ ಕಾದಂಬರಿ ಸಮಾಧಾನಕರ ಬಹುಮಾನಕ್ಕೆ ಭಾಜನವಾದವು. ಈ ಬಹುಮಾನ ತಲಾ ₹ 5 ಸಾವಿರ ನಗದು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.