ಬೆಂಗಳೂರು: ಗರುಡಾ ಮಾಲ್ನಲ್ಲಿ ‘ಬೇಸಿಗೆ ಮಾವು ಮೇಳ ಮತ್ತು ಪುಸ್ತಕೋತ್ಸವ’ ಗುರುವಾರ ಆರಂಭಗೊಂಡಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ಡಾಲಿ ಧನಂಜಯ್ ಮಾತನಾಡಿ, ‘ಮಕ್ಕಳಿಂದ ಹಿರಿಯವರಗೆ ಅಕ್ಷರ ಜ್ಞಾನ ಸಂಪಾದನೆಗೆ 1 ಲಕ್ಷ ಪುಸ್ತಕಗಳು ಇಲ್ಲಿ ಲಭ್ಯವಿವೆ. ನೇರವಾಗಿ ಮಾವಿನ ಹಣ್ಣು ಮಾರಾಟ ಮತ್ತು ಪ್ರದರ್ಶನಕ್ಕೆ ರೈತರಿಗೆ ಉತ್ತಮ ವೇದಿಕೆ ಕಲ್ಪಿಸಲಾಗಿದೆ. ಕನ್ನಡ ನಾಡು, ದೇಶಕ್ಕಾಗಿ ಪ್ರತಿಯೊಬ್ಬರು ಗಟ್ಟಿಯಾಗಿ ನಿಲ್ಲಬೇಕು’ ಎಂದು ಹೇಳಿದರು.

ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ‘ದೇಶದಲ್ಲಿ ರೈತ ಮತ್ತು ಸೈನಿಕ ಎರಡು ಕಣ್ಣು ಇದ್ದಂತೆ. ನಮ್ಮ ಮಾವಿನ ಮೇಳದಿಂದ ರೈತರಿಗೆ ಉತ್ತಮ ಬೆಂಬಲ ಬೆಲೆ ಸಿಗಲಿದೆ. ಸಾರ್ವಜನಿಕರಿಗೆ ಉತ್ತಮ ಮಾವಿನ ಹಣ್ಣು ಸವಿಯುವ ಅವಕಾಶ ಸಿಗುತ್ತದೆ. ಅಕ್ಷರ ಜ್ಞಾನ ಯಾವತ್ತೂ ಕಡಿಮೆಯಾಗಬಾರದು. ಪ್ರತಿದಿನ ಪುಸ್ತಕ ಓದುವುದರಿಂದ ಜ್ಞಾನ ಸಂಪಾದನೆ ಇನ್ನು ಹೆಚ್ಚಾಗುತ್ತದೆ’ ಎಂದು ಹೇಳಿದರು..

ರೈತರಿಂದ ನೇರವಾಗಿ ಗುಣಮಟ್ಟದ ಮಾವುಗಳನ್ನು ಖರೀದಿಸಲು ಉಜ್ವಲ ಅವಕಾಶ ಕಲ್ಪಿಸಲಾಗಿದೆ. ಮಾವು ಮೇಳವು ಮೇ 8ರಿಂದ 11ರವರೆಗೆ ಹಾಗೂ ಪುಸ್ತಕ ಮೇಳವು ಮೇ 8ರಿಂದ 18ರವರೆಗೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.