ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿಗೆ ₹1 ಸಾವಿರ ಕೋಟಿ ಅನುದಾನಕ್ಕೆ ಮನವಿ

Last Updated 3 ಮಾರ್ಚ್ 2022, 20:52 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ತೃತೀಯ ಲಿಂಗಿ ಸಮುದಾಯದವರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಬಜೆಟ್‌ನಲ್ಲಿ ಬಿಎಂಟಿಸಿಗೆ ₹1 ಸಾವಿರ ಕೋಟಿ ಅನುದಾನ ನಿಗದಿ ಮಾಡಬೇಕು’ ಎಂದು ಮುಖ್ಯಮಂತ್ರಿಗೆ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಮನವಿ ಸಲ್ಲಿಸಿತು.

ಭಾರತದ ಯಾವುದೇ ನಗರಗಳಲ್ಲಿ ಇರುವ ಬಸ್ ಟಿಕೆಟ್ ದರಕ್ಕಿಂತ ಬಿಎಂಟಿಸಿ ಬಸ್‌ನಲ್ಲಿ ದುಬಾರಿ ದರ ಇದೆ. ಪುಣೆ ಮತ್ತು ದೆಹಲಿಯಲ್ಲಿ ಐದು ಕಿಲೋ ಮೀಟರ್‌ ದೂರಕ್ಕೆ ಪ್ರಯಾಣ ದರ ₹10 ಇದ್ದರೆ, ಮುಂಬೈನಲ್ಲಿ ₹5, ಚೆನ್ನೈನಲ್ಲಿ ₹6 ಇದೆ. ಆದರೆ, ಬೆಂಗಳೂರಿನಲ್ಲಿ ₹15 ಇದೆ ಎಂದು ಪ್ರಯಾಣಿಕರ ವೇದಿಕೆ ಅಂಕಿ– ಅಂಶ ನೀಡಿತು.

‘ಸಾರಿಗೆ ವೆಚ್ಚ ದುಬಾರಿ ಆಗಿರುವುದರಿಂದ ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ಶಿಕ್ಷಣದ ವೆಚ್ಚಗಳನ್ನು ಅನಿವಾರ್ಯವಾಗಿ ಜನ ಕಡಿತ ಮಾಡಬೇಕಾಗುತ್ತಿದೆ. ಖಾಸಗಿ ವಾಹನ ಬಿಟ್ಟು ಬಸ್ ಉಪಯೋಗಿಸುವಂತೆ ಮಾಡಲು ದರ ಕಡಿಮೆ ಮಾಡಬೇಕು ಎಂಬ ಸಾರ್ವಜನಿಕರ ಅಭಿಪ್ರಾಯವಿದೆ. ಇತರ ರಾಜ್ಯಗಳಂತೆ ಬೆಂಗಳೂರಿನಲ್ಲೂ ಮಹಿಳೆಯರಿಗೆ ಬಸ್ ಸೇವೆ ಉಚಿತ ಇರಬೇಕು. ಬಿಎಂಟಿಸಿ ಸಂಸ್ಥೆಯನ್ನು ಲಾಭ– ನಷ್ಟದ ದೃಷ್ಟಿಯಿಂದ ನೋಡಬಾರದು’ ಎಂದು ಮನವಿಯಲ್ಲಿ ತಿಳಿಸಿದೆ.

ಈ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿದಾಗ 6 ಸಾವಿರಕ್ಕೂ ಹೆಚ್ಚು ಜನ ಈ ಬೇಡಿಕೆಗಳನ್ನು ಒಪ್ಪಿ ಸಹಿ ಹಾಕಿದ್ದಾರೆ. ಬಿಎಂಟಿಸಿ ಬಸ್ ಟಿಕೆಟ್ ದರಗಳನ್ನು ಸಾಮಾನ್ಯ ಜನರಿಗೆ ಅರ್ಧದಷ್ಟು ಕಡಿಮೆಗೊಳಿಸಬೇಕು. ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಿ ನಗರದ ಯಾವ ಭಾಗಕ್ಕಾದರೂ ಸಂಚರಿಸಲು ಅವಕಾಶ ನೀಡಬೇಕು. ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT