ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಎ ನಿವೇಶನ ಕಬಳಿಸಿದ ಮಾಜಿ ಮೇಯರ್‌’

ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್. ರಮೇಶ್‌ ಆರೋಪ
Last Updated 30 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಮಾರಸ್ವಾಮಿ ಬಡಾವಣೆಯಲ್ಲಿ ಮಾಜಿ ಮೇಯರ್‌ ಡಿ. ವೆಂಕಟೇಶಮೂರ್ತಿ ಅವರು ನಾಗರಿಕ ಮೂಲಸೌಲಭ್ಯಕ್ಕಾಗಿ ಮೀಸಲಾದ (ಸಿ.ಎ) ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ’ ಎಂದು ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್. ರಮೇಶ್‌ ಆರೋಪಿಸಿದರು.

‘ಬಡಾವಣೆಯ 2ನೇ ಹಂತದ 18ನೇ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ 58, 67 ಮತ್ತು 68ನೇ ಅಡ್ಡರಸ್ತೆಗಳ ನಡುವೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಒಡೆತನದ ನಾಲ್ಕು ಸಿ.ಎ ನಿವೇಶನಗಳಿವೆ. ಈ ಪೈಕಿ ಒಂದರಲ್ಲಿ ದೇವಾಲಯ, ಮತ್ತೊಂದರಲ್ಲಿ ಪೆಟ್ರೋಲ್‌ ಬಂಕ್‌ ಇದೆ. ಆದರೆ, 1,200 ಚದರ ಅಡಿ ವಿಸ್ತೀರ್ಣದ ಸಿಎ–06 ನಿವೇಶನಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ವೆಂಕಟೇಶಮೂರ್ತಿ ಇದರಲ್ಲಿ ಬ್ಲಾಸಮ್‌ ಶಾಲೆ ನಿರ್ಮಿಸಿ, ಖಾಸಗಿಯವರಿಗೆ ಲಕ್ಷಾಂತರ ರೂಪಾಯಿ ಬಾಡಿಗೆಗೆ ನೀಡಿದ್ದಾರೆ’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಮೊದಲೇ ನಿರ್ಮಿಸಿದ್ದು’

‘ಬಿಡಿಎ ಇಲ್ಲಿ ಬಡಾವಣೆ ಮಾಡುವುದಕ್ಕೆ ಮೊದಲೇ, ಅಂದರೆ 1990ರಲ್ಲಿಯೇ ಇಲ್ಲಿ ಶಾಲೆ ನಿರ್ಮಿಸಲಾಗಿತ್ತು. ಬಿಡಿಎ ಇದನ್ನು ಬಡಾವಣೆ ಎಂದು ಅಧಿಸೂಚನೆ ಹೊರಡಿಸಿದ್ದು 2014ರಲ್ಲಿ. ಅಲ್ಲದೆ, ಸಿಎ–06 ನಿವೇಶನವನ್ನು ನಾನು ಕಬಳಿಸಿಲ್ಲ. ಶಾಲೆ ಇರುವುದು ಅದರ ಪಕ್ಕದಲ್ಲಿ. ಆರು ತಿಂಗಳ ಹಿಂದೆ ಬಿಡಿಎಗೆ ₹17 ಲಕ್ಷವನ್ನೂ ಪಾವತಿಸಲಾಗಿದೆ’ ಎಂದು ವೆಂಕಟೇಶ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT