ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಕ್ಸಿ ಚಾಲಕಿಯರಿಗೆ ನೆರವು

Last Updated 3 ಡಿಸೆಂಬರ್ 2020, 13:22 IST
ಅಕ್ಷರ ಗಾತ್ರ

ಯಲಹಂಕ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಮೂಲಕ ಟ್ಯಾಕ್ಸಿ ಚಾಲಕಿಯರಿಗೆ ಉದ್ಯೋಗ ಸೌಲಭ್ಯ ಕಲ್ಪಿಸುವ ಯೋಜನೆಗೆ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ರವಿ ಬುಧವಾರ ಚಾಲನೆ ನೀಡಿದರು.

‘ಜಸ್ಟ್‌ ಕಾಲ್ ಕ್ಯಾಬ್ಸ್’ ಸಂಸ್ಥೆಯು ವಿದ್ಯಾರಣ್ಯಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕೆಂಬ ಉದ್ದೇಶದಿಂದ ಜಸ್ಟ್ ಕಾಲ್ ಕ್ಯಾಬ್ಸ್ ಸಂಸ್ಥೆಯವರು ನಿಗಮಕ್ಕೆ12 ವಾಹನಗಳನ್ನು ಒದಗಿಸಿದ್ದಾರೆ. ಸದ್ಯದಲ್ಲೇ ಇನ್ನೂ 35 ವಾಹನಗಳನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಈ ಮೂಲಕ ಚಾಲಕಿಯರ ನೆರವಿಗೆ ನಿಂತಿರುವುದು ಶ್ಲಾಘನಾರ್ಹ’ ಎಂದರು.

ಸಂಸ್ಥೆಯ ಮಾಲೀಕರಾದ ಎಂ. ದೀನಾ ಮಾತನಾಡಿ, ‘ನಿಗಮಕ್ಕೆ ಮುಂಗಡ ಹಣ ಪಾವತಿಸಿ ಸಾಲ ಸೌಲಭ್ಯದ ಮೂಲಕ ಚಾಲಕಿಯರು ವಾಹನಗಳನ್ನು ಪಡೆಯಬಹುದಾಗಿದೆ.ಚಾಲಕಿಯರಿಗೆ ವೇತನವನ್ನೂ ನೀಡಲಾಗುತ್ತದೆ. ಅವರು ಸಾಲ ಮರುಪಾವತಿಸಿದ ನಂತರ, ವಾಹನಗಳು ಚಾಲಕಿಯರಿಗೇ ಸೇರಲಿವೆ’ ಎಂದರು.

‘ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿದ್ದೆವು. ಜಸ್ಟ್‌ ಕ್ಯಾಬ್ಸ್ ಸಂಸ್ಥೆಯು ವಾಹನ ಒದಗಿಸಿ ಪ್ರೋತ್ಸಾಹಿಸುತ್ತಿರುವುದು ಸಂತಸ ತಂದಿದೆ’ ಎಂದು ಚಾಲಕಿ ಮಾರ್ಗರೆಟ್ ಸಂತಸ ವ್ಯಕ್ತಪಡಿಸಿದರು.

ಟ್ಯಾಕ್ಸಿ ಸೇವೆಯು ದಿನದ24 ತಾಸು ಲಭ್ಯವಿರಲಿದೆ. ಟ್ಯಾಕ್ಸಿಗಳಿಗಾಗಿ 080-45454646 ಸಂಖ್ಯೆಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT