ಗುರುವಾರ , ಅಕ್ಟೋಬರ್ 28, 2021
19 °C

ಹೋಟೆಲ್‌ ಉದ್ಯೋಗಿ‌ ಮೇಲೆ ಅತ್ಯಾಚಾರಕ್ಕೆ‌ ಯತ್ನ ಆರೋಪ: ಉಬರ್ ಚಾಲಕ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಯುವತಿಯೊಬ್ಬರ ಮೇಲೆ‌ ಅತ್ಯಾಚಾರಕ್ಕೆ‌ ಯತ್ನಿಸಿರುವ ಆರೋಪದಡಿ‌ ಉಬರ್ ಚಾಲಕರೊಬ್ಬರನ್ನು ಬೈಯಪ್ಪನಹಳ್ಳಿ‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

'ಆಂಧ್ರಪ್ರದೇಶದ ಆರೋಪಿ, ನಗರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ. ವ್ಯಕ್ತಿಯೊಬ್ಬರ ಹೆಸರಿನಲ್ಲಿದ್ದ ಕ್ಯಾಬ್‌ನ ಚಾಲಕನಾಗಿ ಕೆಲಸ ಮಾಡುತ್ತಿದ್ದ' ಎಂದು‌ ಪೊಲೀಸರು ಹೇಳಿದರು.

'ಹೋಟೆಲ್‌ನಲ್ಲಿ ಕೆಲಸ ಮಾಡುವ ಯುವತಿ, ಮುರುಗೇಶ್ ಪಾಳ್ಯದಲ್ಲಿ ವಾಸವಿದ್ದರು. ಬುಧವಾರ ರಾತ್ರಿ ಜೀವನ್‌ಬಿಮಾ ನಗರದಲ್ಲಿರುವ ಸ್ನೇಹಿತರ ಮನೆಗೆ ಯುವತಿ ಹೋಗಿದ್ದಳು. ಅಲ್ಲಿಂದ ವಾಪಾಸು ಬರಲು ಕ್ಯಾಬ್ ಕಾಯ್ದಿರಿಸಿದ್ದಳು.'

'ಸ್ಥಳಕ್ಕೆ ಬಂದಿದ್ದ ಚಾಲಕ, ಯುವತಿ ಹತ್ತಿಸಿಕೊಂಡು ಮನೆ ಬಳಿ ಬಂದಿದ್ದ. ಇದೇ ವೇಳೆಯೇ ಪ್ರಯಾಣ ದರದ ವಿಚಾರದಲ್ಲಿ ಅವರಿಬ್ಬರ ನಡುವೆ ಗಲಾಟೆ ಆಗಿತ್ತು. ಇದೇ ಸಂದರ್ಭದಲ್ಲೇ ಚಾಲಕ ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದನೆಂದು ಯುವತಿ ಹೇಳುತ್ತಿದ್ದಾಳೆ. ಆದರೆ ಚಾಲಕ, 'ಅತ್ಯಾಚಾರಕ್ಕೆ ಯತ್ನಿಸಿಲ್ಲ. ಯುವತಿಯೇ ಜಗಳ ತೆಗೆದು ಸುಳ್ಳು ಹೇಳುತ್ತಿದ್ದಾಳೆ' ಎಂಬುದಾಗಿ ತಿಳಿಸುತ್ತಿದ್ದಾನೆ. ಹೀಗಾಗಿ, ಏನಾಗಿದೆ? ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ' ಎಂದೂ ಪೊಲೀಸರು ‌ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು