ಶನಿವಾರ, ಜೂನ್ 12, 2021
22 °C

ಕೋವಿಡ್ ಆರೈಕೆ ಕೇಂದ್ರವಾದ ಕೆನಡಿಯನ್‌ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ:ಯಲಹಂಕದಲ್ಲಿರುವ ಕೆನಡಿಯನ್‌ ವಸತಿ ಶಾಲೆಯನ್ನು ಕೋವಿಡ್‌ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗಿದೆ.

120 ಹಾಸಿಗೆಗಳ ಈ ಕೇಂದ್ರವನ್ನು ಬಿಡಿಎ ಅಧ್ಯಕ್ಷ ಎಸ್‌.ಆರ್. ವಿಶ್ವನಾಥ ಅವರ ಮೂಲಕ ಶಾಲೆಯ ಮುಖ್ಯಸ್ಥರಾದ ರಮಣಿ ಶಾಸ್ತ್ರಿಯವರು ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಅವರಿಗೆ ಶನಿವಾರ ಹಸ್ತಾಂತರಿಸಿದರು.

‘ಇಡೀ ಪ್ರಪಂಚವೇ ಸಂಕಷ್ಟದಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಕೆನಡಿಯನ್ ಶಾಲೆಯ ರೀತಿಯಲ್ಲಿ ಖಾಸಗಿ ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಬೇಕು’ ಎಂದು ವಿಶ್ವನಾಥ್ ಕೋರಿದರು. 

‘ಈ ಶಾಲೆ 60 ಕೊಠಡಿಗಳನ್ನು ಹೊಂದಿದ್ದು, ಪ್ರತಿ ಕೊಠಡಿಯಲ್ಲಿ ಎರಡು ಹಾಸಿಗೆಗಳು ಇವೆ. ಪ್ರತಿಯೊಂದಕ್ಕೂ ಆಮ್ಲಜನಕ ಪೂರೈಸುವ ಸಾಧನಗಳನ್ನು ಅಳವಡಿಸಲಾಗಿದೆ’ ಎಂದರು.

ರಮಣಿ ಶಾಸ್ತ್ರಿ, ‘ಸಾಮಾಜಿಕ ಕಳಕಳಿಯ ಉದ್ದೇಶದಿಂದ ನಾವು ನಮ್ಮ ಶಾಲೆಯನ್ನು ಕೇವಲ 15 ದಿನಗಳಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದೇವೆ. ಇಲ್ಲಿ ಸೈಟ್ ಕೇರ್ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ದಿನದ 24 ಗಂಟೆಯೂ ಸೋಂಕಿತರಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಲಿದ್ದಾರೆ’ ಎಂದರು.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.