ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ

Last Updated 13 ಮಾರ್ಚ್ 2020, 22:33 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ವಿಗ್ ತಯಾರಿಸಿ ಉಚಿತವಾಗಿ ನೀಡುವ ಕೆಲಸವನ್ನು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿವೆ. ಇಂಥ ಪ್ರಯತ್ನ ಬನ್ನೇರುಘಟ್ಟ ರಸ್ತೆಯ ಟಿ. ಜಾನ್ ಕಾಲೇಜಿನಲ್ಲಿ ನಡೆದಿದೆ.

ಕಾಲೇಜಿನ ಎನ್ಎಸ್ಎಸ್ ಘಟಕವು ‘ಗ್ರೀನ್ ಟ್ರೆಂಡ್’ ಸಂಸ್ಥೆ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಕ್ಯಾನ್ಸರ್ ಪೀಡಿತರಿಗೆ ಕೂದಲು ನೀಡಿ’ ಎಂಬ ಮೂರು ದಿನಗಳ ಅಭಿಯಾನ ಏರ್ಪಡಿಸಿದ್ದು, ಅಧ್ಯಾಪಕರೂ ಸೇರಿ 300 ವಿದ್ಯಾರ್ಥಿನಿಯರು ಕೂದಲು ದಾನ ಮಾಡಿದ್ದಾರೆ.

ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರೇರಣಾ, ‘ಹೀಗೂ ಸೇವೆ ಮಾಡಬಹುದು ಎಂದು ತಿಳಿಯಿತು. ಕೂದಲು ನೀಡಿದ್ದು ಖುಷಿಯಾಗಿದೆ’ ಎಂದರು.

ಬಿಬಿಎ ವಿದ್ಯಾರ್ಥಿನಿ ನಿಶಾ, ‘ ಕ್ಯಾನ್ಸರ್‌ನಿಂದ ಕೂದಲು ಇರುವುದಿಲ್ಲ ಎಂದು ಕಲ್ಪಿಸಿಕೊಳ್ಳಲೂ ಆಗದು. ಅದಕ್ಕಾಗಿಯೇ ನಾನು ದಾನ ಮಾಡಿದೆ’ ಎಂದರು.

ಗ್ರೀನ್ ಟ್ರೆಂಡ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ರಾಜೀವ್ ಪಾಟೀಲ, ‘ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಸಂಗ್ರಹವಾದ ಕೂದಲಿನಿಂದ ವಿಗ್ ತಯಾರಿಸಿ ಬಡರೋಗಿಗಳಿಗೆ ಉಚಿತವಾಗಿ ನೀಡುತ್ತೇವೆ’ ಎಂದರು. ಎನ್ಎಸ್ಎಸ್ ಘಟಕದ ನಿರ್ವಾಹಕಿ ಆರ್.ವೈಷ್ಣವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT