ಬೆಂಗಳೂರು: ಬನಶಂಕರಿ ಎರಡನೇ ಹಂತದಲ್ಲಿರುವ ಸೇವಾ ಕ್ಷೇತ್ರ ಆಸ್ಪತ್ರೆಯ ಮಾತೃಛಾಯಾ ಆವರಣದಲ್ಲಿ ಆಯೋಜಿಸಿರುವ ಕೆನರಾ ಉತ್ಸವವನ್ನು ಕೆನರಾ ಬ್ಯಾಂಕ್ನ ಮುಖ್ಯ ಮಹಾಪ್ರಬಂಧಕ ಬಿ. ಶಂಭುಲಾಲ್ ಮಂಗಳವಾರ ಉದ್ಘಾಟಿಸಿದರು.

ಕೆನರಾ ಬ್ಯಾಂಕ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಕೆನರಾ ಬ್ಯಾಂಕ್ನ ಪರಿಹಾರ ಮತ್ತು ಕಲ್ಯಾಣ ಸೊಸೈಟಿಯ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಿದ್ದು, ಇದೇ 22ರವರೆಗೆ ನಡೆಯಲಿದೆ.

ಸೊಸೈಟಿಯ ಅಧ್ಯಕ್ಷ ಪ್ರಕಾಶ್ ಮಲ್ಯ ಮಾತನಾಡಿ, ‘ಈ ಉತ್ಸವವನ್ನು 12 ವರ್ಷಗಳಿಂದ ಆಯೋಜಿಸುತ್ತಿದ್ದು, ಮಹಿಳಾ ಉದ್ಯಮಿಗಳು, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ’ ಎಂದರು.

ಇದೇ ಸಂದರ್ಭದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳಾದ ಕಮಲಮ್ಮ, ವಿನುತಾ ಹಾಗೂ ಡೊರೆಟ್ಟೆ ಕ್ರಿಸ್ಟೆಬಲ್ ಅವರನ್ನು ಸನ್ಮಾನಿಸಲಾಯಿತು.

ಕೆನರಾ ಬ್ಯಾಂಕ್ನ ಉಪಮುಖ್ಯ ಪ್ರಬಂಧಕ ದಲ್ಬೀರ್ ಸಿಂಗ್ ಗ್ರೋವರ್, ಡಿ.ಎಸ್. ಆನಂದಮೂರ್ತಿ, ಕೆ.ಎಸ್.ಎಸ್. ಕಾಮತ್, ಪ್ರೇಮಾ ರತ್ನಾಕರ್, ಶ್ರೀಧರ್ ಸಗಾಬಲ, ಎಸ್.ಟಿ. ರಾಮಚಂದ್ರ, ಶಂಕರ್ ಗೌರಯ್ಯ, ರಾಜಶ್ರೀ ಸತೀಶ್, ಶೀಲಾ ಕಾಮತ್, ಬ್ರಿಜುಷಾ ಬಾಲ್, ಸುಮಂಗಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.